ಮನೆ ಮನರಂಜನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್, ಕಿಯಾರಾ: ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ಹಂಚಿಕೊಂಡ ನಟಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್, ಕಿಯಾರಾ: ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ಹಂಚಿಕೊಂಡ ನಟಿ

0

ಮುಂಬೈ: ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆ. 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಿಯಾರಾ, ಈಗ ನಾವು ಶಾಶ್ವತವಾಗಿ ಒಬ್ಬನ್ನೊಬ್ಬರು ಬಂಧಿಯಾಗಿಸಿಕೊಂಡಿದ್ದೇವೆ. ಜತೆಗೆ ನಮ್ಮ ಮುಂದಿನ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನಾವು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು, ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಉಡುಪುಗಳನ್ನು ಸಿದ್ಧಡಿಸಿದ್ದರು. ವಿಶೇಷವಾಗಿ ಕಿಯಾರಾ ಲೆಹಂಗಾದಲ್ಲಿ ಮತ್ತು ಸಿದ್ಧಾರ್ಥ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ.

ಮನೀಶ್ ಮಲ್ಹೋತ್ರಾ ತಂಡವು ಮೆಹೆಂದಿ, ಹಳದಿ ಶಾಸ್ತ್ರ ಸೇರಿದಂತೆ ವಿವಾಹಪೂರ್ವ ಕಾರ್ಯಕ್ರಮಗಳ ಉಡುಗೆಗಳನ್ನು ಸಹ ಸಿದ್ಧಡಿಸಿದ್ದರು. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಸಂಗೀತಾ, ಮೆಹಂದಿ ಕಾರ್ಯಕ್ರಮಗಳು ಜರುಗಿದೆ.

ಫೆಬ್ರುವರಿ 12ರಂದು ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಷ್ಟೇ ಭಾಗಿಯಾಗಿದ್ದರು.