ಮನೆ ಮನರಂಜನೆ ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

0

ಹಿಂದಿ ಭಾಷೆಯ ಜನಪ್ರಿಯ ಕಾರ್ಯಕ್ರಮವಾದ ಕಪಿಲ್​ ಶರ್ಮಾ ಶೋನಲ್ಲಿ ಸ್ಯಾಂಡಲ್​’ವುಡ್​’ನ ಗೋಲ್ಡನ್​ ಸ್ಟಾರ್​ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ನಿರೂಪಕ ಕಪಿಲ್​ ಶರ್ಮಾ ಮತ್ತು ಕಾರ್ಯಕ್ರಮಕ್ಕೆ ಸಿದ್ಧರಾಗಿ ತೆರಳುತ್ತಿರುವ ವಿಡಿಯೋವನ್ನು ನಟ ಗಣೇಶ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಾಕ್​ ಶೋನ ನಿರೂಪಕ ಕಪಿಲ್​ ಶರ್ಮಾ ಸಹ ಗಣೇಶ್ ಆಗಮನಕ್ಕೆ ಸಂತಸ ವ್ಯಕ್ತಪಡಿಸಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಕಪಿಲ್​ ಶರ್ಮಾ ಶೋನಲ್ಲಿ ಈಗಾಗಲೇ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್​ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಅವರೊಂದಿಗೆ ಒಮ್ಮೆ ಕಾಣಿಸಿಕೊಂಡಿದ್ದರೆ, ಮತ್ತೊಮ್ಮೆ ನಟ ಸುನೀಲ್​ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಕಪಿಲ್​ ಶರ್ಮಾ ಶೋನಲ್ಲಿ ಎರಡು ಬಾರಿ ಕಾಣಿಸಿಕೊಂಡಿರುವ ಕನ್ನಡದ ಮೊದಲ ನಟ ಎನ್ನುವ ಖ್ಯಾತಿ ಸುದೀಪ್​ ಅವರಿಗಿದೆ. ಇದೀಗ ಗೋಲ್ಡನ್​ ಸ್ಟಾರ್​ ಗಣೇಶ್ ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳವಾಗಿದೆ.

ಗಣೇಶ್​ ಶೋನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ವಿಚಾರವಷ್ಟೇ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಶೋನ ಪ್ರೋಮೋ ಬಳಿಕವೇ ತಿಳಿದು ಬರಬೇಕಿದೆ. ಗಣೇಶ್​ ನಟನೆಯ ಬಾನ ದಾರಿಯಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಪ್ರಚಾರ ಸಲುವಾಗಿ ಗೋಲ್ಡನ್​ ಸ್ಟಾರ್​ ಗಣೇಶ್ ಹೋಗಲಿದ್ದಾರೋ ಅಥವಾ ಅತಿಥಿಯಾಗಿ ಆ ಕಾರ್ಯಕ್ರಮಕ್ಕೆ ತೆರಳಲಿದ್ದಾರೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ನನ್ನ ಮೆಚ್ಚಿನ ಕಾರ್ಯಕ್ರಮದ (ಕಪಿಲ್​ ಶರ್ಮಾ ಶೋ) ಭಾಗವಾಗಲು ಬಹಳ ಸಂತೋಷವಾಗಿದೆ, ಕಪಿಲ್ ಶರ್ಮಾ ಸರ್ ಧನ್ಯವಾದಗಳು. ಸರ್ ನಿಮ್ಮ ಪ್ರೀತಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಗೋಲ್ಡನ್​ ಸ್ಟಾರ್​ ಗಣೇಶ್​ ಸೋಶಿಯಲ್​ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.