ಬೆಂಗಳೂರು: ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಗ್ರಾಹಕರಿಂದ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಆ್ಯಪ್ ಆಧರಿತ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ.
ಬೆಂಗಳೂರು, ಮುಂಬೈ, ದೆಹಲಿ, ಗುರ್ಗಾಂವ್, ಮತ್ತು ಸೇಲಂನ ವಿವಿಧೆಡೆ ನಡೆದ ದಾಳಿಯಲ್ಲಿ ಎಚ್.ಪಿ.ಜೆಡ್ ಟೋಕನ್ ಮತ್ತಿತರ ಆ್ಯಪ್ ಆಧರಿತ ಕಂಪನಿಗಳಲ್ಲಿ ಶೋಧಕಾರ್ಯ ಮುಂದುವರೆದಿದೆ.
ಕ್ರಿಪ್ಟೋ ಕರೆನ್ಸಿಯ ಮೇಲೆ ಹೂಡಿಕೆ ಮಾಡಿದರೆ ಲಾಭಾಂಶ, ಸಾಲ ಸೇರಿದಂತೆ ವಿವಿಧ ಆಮಿಷ ನೀಡಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸುತ್ತಿದ್ದ ಕೆಲ ಕಂಪನಿಗಳು ಬಳಿಕ ಹೂಡಿಕೆದಾರರ ಸದಸ್ಯತ್ವ ರದ್ದುಗೊಳಿಸಿ ವಂಚಿಸುತ್ತಿದ್ದ ಆರೋಪ ಕೇಳಿ ಬಂದಿತ್ತು.
ಎಚ್.ಪಿ.ಜೆಡ್ ಟೋಕನ್ ಕಂಪನಿಯ ವಿರುದ್ಧ ನಾಗಾಲ್ಯಾಂಡ್’ನ ಕೋಹಿಮಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಟ್ಯಾಂತರ ರೂ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಪ್ರತ್ಯೇಕ ತನಿಖೆ ಆರಂಭಿಸಿತ್ತು.
ಎಚ್.ಪಿ.ಜೆಡ್ ಟೋಕನ್ ಮತ್ತಿತರ ಕಂಪನಿಗಳ ಮೇಲೆ ದಾಳಿ ನಡೆಸಿ ಅವುಗಳ ಡಿಮ್ಯಾಟ್ ಖಾತೆಗಳಲ್ಲಿದ್ದ 29.5 ಕೋಟಿ ರೂ ಜಪ್ತಿ ಮಾಡಿದೆ.
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.