ಮನೆ ಮನರಂಜನೆ ಸಿನಿ ಅಭಿಮಾನಿಗಳ ಮನಗೆದ್ದ “ಮಾಫಿಯಾ” ಚಿತ್ರದ ಪೋಸ್ಟರ್

ಸಿನಿ ಅಭಿಮಾನಿಗಳ ಮನಗೆದ್ದ “ಮಾಫಿಯಾ” ಚಿತ್ರದ ಪೋಸ್ಟರ್

0

ನಟ ಪ್ರಜ್ವಲ್ ದೇವರಾಜ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ “ಮಾಫಿಯಾ’ ಚಿತ್ರತಂಡದ ಕಡೆಯಿಂದ ಪ್ರೇಮಿಗಳ ದಿನಕ್ಕೆ ಶುಭಕೋರುವ ಪೋಸ್ಟರ್ “ವ್ಯಾಲೆಂಟೈನ್ಸ್ ಡೇ’ ದಿನದ ಸಂದರ್ಭದಲ್ಲಿ ಹೊರಬಂದಿದೆ.

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಪ್ರಜ್ವಲ್ ಮತ್ತು ಅದಿತಿ ಲುಕ್ ಗಮನ ಸೆಳೆಯುತ್ತಿದ್ದು, ಪೋಸ್ಟರ್’ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾಫಿಯಾ’ ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಸಿನಿಮಾವಾಗಿದ್ದು, ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲೋಹಿತ್ ಹೆಚ್. ನಿರ್ದೇಶನದ ಈ ಚಿತ್ರವನ್ನು ಕುಮಾರ್ ಬಿ ನಿರ್ಮಿಸಿದ್ದಾರೆ