ಮನೆ ಮನರಂಜನೆ ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಹೇಗಿದೆ ?

ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಹೇಗಿದೆ ?

0

ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತವಾಗಿದ್ದು, ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಮಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು ವೈದ್ಯರು ಆಂಜಿಯೋಪ್ಲಾಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ದೈಹಿಕ ಆರೋಗ್ಯಕ್ಕೇ ಹೆಚ್ಚು ಒತ್ತು ನೀಡುವ ಸುಶ್ಮಿತಾ ಸೇನ್ ಅವರು ತಮ್ಮ ಫಿಟ್ನೆಸ್ ನಿಂದಾಗಿ ಹಲವಾರು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ.

ನಿನ್ನ ಹೃದಯವನ್ನು ಖುಷಿಯಾಗಿ ಮತ್ತು ಧೈರ್ಯದಿಂದಿಡು.  ಆಗ ಅದು ನಿನಗೆ ಅತ್ಯಂತ ಅವಶ್ಯಕತೆಯಿದ್ದಾಗ ನಿನ್ನ ಜೊತೆಗಿರುತ್ತದೆ ಎಂದು ಸೇನ್ ತಮ್ಮ ತಂದೆ ಅವರಿಗೆ ಹೇಳಿದ್ದ ಮಾತಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ಎರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ವೈದ್ಯರು ಆಂಜಿಯೋಪ್ಲಾಸ್ಟ್ ಮಾಡಿ, ಸ್ಟಂಟ್ ಅಳವಡಿಸಿದ್ದಾರೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ಈ ಪೋಸ್ಟ್ ನನ್ನ ಆರೋಗ್ಯ ಸುಧಾರಿಸಿದೆ ಎಂಬ ಶುಭಸುದ್ದಿಯನ್ನು ನಿಮಗೆ ತಿಳಿಸಲು ಹಂಚಿಕೊಂಡಿದ್ದೇನೆ. ಎಲ್ಲವೂ ಚೆನ್ನಾಗಿದೆ. ನಾನು ಮತ್ತೆ ಮುಂದಿನ ಜೀವನಕ್ಕೆ ತಯಾರಾಗಿದ್ದೇನೆ. ದೇವರು ದೊಡ್ಡವನು ಎಂದು ಅವರು ಬರೆದುಕೊಂಡಿದ್ದಾರೆ.