ಮನೆ ರಾಜ್ಯ ಕೊಡಗಿನಲ್ಲಿ ಮಳೆ ಆರಂಭ

ಕೊಡಗಿನಲ್ಲಿ ಮಳೆ ಆರಂಭ

0

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಮಂಗಳವಾರ ಮಧ್ಯಾಹ್ನ ಮಳೆ ಸುರಿದಿದೆ.

ನಾಪೋಕ್ಲು ಹೋಬಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಡಿಕೇರಿ ಸೇರಿದಂತೆ ಹಲವೆಡೆ ದಟ್ಟ ಮೋಡಕವಿದ ವಾತಾವರಣವಿದೆ.

ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಕೆಲವೆಡೆ ಮಳೆಯಾಗಲಿದೆ ಎಂದು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.