ಮನೆ ರಾಜ್ಯ ಉದ್ಘಾಟನೆಗೊಂಡ ಮರುದಿನವೇ ಕಿತ್ತುಬಂದ ಬೆಂಗಳೂರು–ಮೈಸೂರು ಎಕ್ಸ್‌ ಪ್ರೆಸ್‌ ವೇ

ಉದ್ಘಾಟನೆಗೊಂಡ ಮರುದಿನವೇ ಕಿತ್ತುಬಂದ ಬೆಂಗಳೂರು–ಮೈಸೂರು ಎಕ್ಸ್‌ ಪ್ರೆಸ್‌ ವೇ

0

ರಾಮನಗರ: ಉದ್ಘಾಟನೆಗೊಂಡ ಮರುದಿನವೇ ಬೆಂಗಳೂರು–ಮೈಸೂರು ಎಕ್ಸ್‌ ಪ್ರೆಸ್‌ ವೇ ಕಿತ್ತು ಬಂದಿದೆ.

ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್‌ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದ್ದು, ದುರಸ್ತಿ ಮಾಡಲಾಗುತ್ತಿದೆ.

ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಲಾರಿ ಪಲ್ಟಿಯಾಗಿದ್ದು, ಕೆಎಸ್‌’ಆರ್‌’ಟಿಸಿ ವೊಲ್ವೊ ಬಸ್‌ ಸೇರಿದಂತೆ ಅನೇಕ ವಾಹನಗಳು ಸ್ಕಿಡ್‌ ಆಗಿದ್ದವು.