ಮನೆ ಅಪರಾಧ ಹೈದರಾಬಾದ್: ಖಾಸಗಿ ಬಸ್ ಡಿಕ್ಕಿಯಾಗಿ 14 ಹಸುಗಳ ಸಾವು

ಹೈದರಾಬಾದ್: ಖಾಸಗಿ ಬಸ್ ಡಿಕ್ಕಿಯಾಗಿ 14 ಹಸುಗಳ ಸಾವು

0

ಹೈದರಾಬಾದ್: ಖಾಸಗಿ ಬಸ್ ಡಿಕ್ಕಿ ಹೊಡೆದು 14 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತೆಲಂಗಾಣದ ನಾಲಗೊಂಡಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಅಡ್ಡಂಕಿ-ನಾರ್ಕೆಟ್’ಪಲ್ಲಿ ಹೆದ್ದಾರಿ ಬಳಿಯ ಬಗ್ಗಬವಿಗುಡೆಮ್ ಎಂಬ ಹಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಹಸುಗಳು ಮೃತಪಟ್ಟು 6 ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

ಹೈದರಾಬಾದ್’ನಿಂದ ಚೆನ್ನೈಗೆ ಬರುತ್ತಿದ್ದ ಬಸ್ಸು ಹೆದ್ದಾರಿ ದಾಟುತ್ತಿದ್ದ ಹಸುಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, 7 ಲಕ್ಷ ರೂ. ಮೊತ್ತದ ಹಸುಗಳನ್ನು ಸಾವನ್ನಪ್ಪಿದೆ. ಬಸ್’ನಲ್ಲಿದ್ದವರು  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ರೈತ ನೀಡಿದ ದೂರಿನಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.