ಮನೆ ಮನರಂಜನೆ ಜೇಮ್ಸ್ ಚಿತ್ರದ ನೆನಪಿಗಾಗಿ ಅಭಿಮಾನಿಗಳಿಂದ ಕೀ ಚೈನ್ ವಿತರಣೆ

ಜೇಮ್ಸ್ ಚಿತ್ರದ ನೆನಪಿಗಾಗಿ ಅಭಿಮಾನಿಗಳಿಂದ ಕೀ ಚೈನ್ ವಿತರಣೆ

0

ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಇಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಮೈಸೂರಿನ ಗಾಯತ್ರಿ ಚಿತ್ರ ಮಂದಿರದ ಮುಂಭಾಗದಲ್ಲಿ ವೀರ ಕನ್ನಡಿಗ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಸಂಘದ ಸದಸ್ಯರು ಕೀ ಚೈನ್​ ವಿತರಿಸಿದ್ದಾರೆ.

ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜೇಮ್ಸ್​ ಲೋಗೋವುಳ್ಳ ಕೀ ಚೈನ್​ ಹಂಚಲಾಯಿತು.

ಜೇಮ್ಸ್ ಸಿನಿಮಾದ ಅಬ್ಬರಕ್ಕೆ ಅಭಿಮಾ‌ನಿಗಳು ಫಿದಾ ಆಗಿದ್ದು, ಮೈಸೂರಿನ ಹಲವು ಥಿಯೇಟರ್​ಗಳ ಮುಂದೆ ಅಭಿಮಾ‌ನಿಗಳ ದಂಡು ಹರಿದು ಬಂದಿದೆ. ಹಲವು ಮಂದಿ ಜೇಮ್ಸ್ ನೋಡುತ್ತಾ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೇಮ್ಸ್ ಸಿನಿಮಾದ ಲೋಗೋವುಳ್ಳ ಕೀ ಚೈನ್ ಅನ್ನು ಸದಸ್ಯರು ಉಚಿತವಾಗಿ ನೀಡುತ್ತಿದ್ದಾರೆ.

ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯ‌ ಶ್ರೀನಿವಾಸ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನೆನಪಿಗಾಗಿ ರಾಜ್ಯಾದ್ಯಂತ ಕೀ ಚೈನ್ ಕೊಡಬೇಕು ಅಂದು ಕೊಂಡಿದ್ದೇವೆ. ಇಂದು ಸಾಂಕೇತಿಕವಾಗಿ 2 ಸಾವಿರ ಕೀ ಚೈನ್ ಕೊಡುತ್ತಿದ್ದೇವೆ ಎಂದರು.