ಮನೆ ಅಂತಾರಾಷ್ಟ್ರೀಯ ಕೆನಡಾದಿಂದ ಅಮೇರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ: ಭಾರತೀಯರು ಸೇರಿದಂತೆ 8 ಮಂದಿ ಸಾವು

ಕೆನಡಾದಿಂದ ಅಮೇರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ: ಭಾರತೀಯರು ಸೇರಿದಂತೆ 8 ಮಂದಿ ಸಾವು

0

ವಾಷಿಂಗ್ಟನ್: ಕೆನಾಡದಿಂದ ಅಮೆರಿಕಕ್ಕೆ ಅಕ್ರಮವಾಗಿ ದೋಣಿಯ ಮೂಲಕ ಪ್ರಯಾಣಿಸುತ್ತಿದ್ದ 8 ಮಂದಿ ಸೇಂಟ್ ಲಾರೆನ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅದರಲ್ಲಿ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾದ ಕೋಸ್ಟ್ ಗಾರ್ಡ್‌’ನ ವೈಮಾನಿಕ ಶೋಧದ ಸಮಯದಲ್ಲಿ ಕ್ವಿಬೆಕ್‌’ನ ಜವುಗು ಪ್ರದೇಶದಲ್ಲಿ ಮುಳುಗಿದ್ದ ಬೋಟ್‌ನಿಂದ ಪೊಲೀಸರು 8 ಶವಗಳನ್ನು ಹೊರತೆಗೆದಿದ್ದಾರೆ.

ಮೃತರೆಲ್ಲರೂ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಪತ್ತೆಯಾದ ಶವಗಳಲ್ಲಿ ಒಂದು ಮೂರು ವರ್ಷದೊಳಗಿನ ಮಗುವಿನದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಮೃತದೇಹದ ಜೊತೆ ಕೆನಡಾದ ಪಾಸ್‌’ಪೋರ್ಟ್‌ ಪತ್ತೆಯಾಗಿದೆ. ಮಗು ರೊಮೇನಿಯಾ ಕುಟುಂಬದ್ದಾಗಿದೆ ಎಂದು ತಿಳಿದುಬಂದಿದೆ.