ಮನೆ ಆರೋಗ್ಯ ಕೊರೊನಾ: ಒಂದೇ ದಿನದಲ್ಲಿ  6 ಸಾವಿರ ಪ್ರಕರಣ

ಕೊರೊನಾ: ಒಂದೇ ದಿನದಲ್ಲಿ  6 ಸಾವಿರ ಪ್ರಕರಣ

0

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌ ದೃಢಪಟ್ಟ 6,155 ಹೊಸ ಪ್ರಕರಣಗಳು ವರದಿಯಾಗಿವೆ.

Join Our Whatsapp Group

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.47 ಕೋಟಿಗೆ (4,47,51,259) ಏರಿಕೆಯಾಗಿದೆ. ಆ ಪೈಕಿ 5,30,954 ಮಂದಿ ಸಾವಿಗೀಡಾಗಿದ್ದಾರೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರ 6,050 ಪ್ರಕರಣಗಳು ಪತ್ತೆಯಾಗಿದ್ದವು. ಕೋವಿಡ್‌ನಿಂದಾಗಿ ಶುಕ್ರವಾರ ಕೇರಳದಲ್ಲಿ ಇಬ್ಬರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31,194ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಇದುವರೆಗೆ 220.66 ಕೋಟಿ ಕೋವಿಡ್‌ ಡೋಸ್ ಲಸಿಕೆ ವಿತರಿಸಲಾಗಿದೆ.