ಬೀದರ್ : ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆದಿದೆ. ಇನ್ನೂ ಟಿಕೆಟ್ ವಂಚಿತರು ಬಂಡಾಯ ಆಗೋದು ಸಾಮಾನ್ಯ. ಇದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾತ್ರವಲ್ಲ ಮುಖ್ಯಮಂತ್ರಿ ಅಭ್ಯರ್ಥಿಗಳ ಮಧ್ಯವೂ ಬಂಡಾಯ ಇದೆ. ಅವರವರೇ ಕಿತ್ತಾಡಿಕೊಂಡು ಈ ಚುನಾವಣೆಯಲ್ಲಿ ನಶಿಸಿ ಹೋಗುತ್ತಾರೆ ಎಂದು ಹೇಳಿದರು.
ಎಸ್ ಡಿಪಿಐ ಹಾಗೂ ಪಿಎಫ್’ಐ ಒಂದೇ ನಾಣ್ಯದ ಎರಡು ಮುಖಗಳು. ಎಷ್ಟೋ ಚುನಾವಣೆಯಲ್ಲಿ ಕಾಂಗ್ರೆಸ್ ಎಸ್ ಡಿಪಿಐ ಹಾಗೂ ಪಿಎಫ್’ಐ ಜೊತೆ ಕೈಜೋಡಿಸಿದೆ. ಕಾಂಗ್ರೆಸ್ ನ ಬಿ ಟೀಮನಂತೆ ಆ ಸಂಘಟನೆಗಳು ಕೆಲಸ ಮಾಡುತ್ತಿವೆ. ಬ್ಯಾನ್ ಆಗಿರುವ ಪಿಎಫ್’ ಐ ನ ಕಾರ್ಯಕರ್ತರು ಎಸ್ ಡಿಪಿಐ ಸೇರೋದು ಜಗಜ್ಜಾಹೀರಾಗಿದೆ. ಈ ಸಮಯದಲ್ಲೂ ಕಾಂಗ್ರೆಸ್ ಮಾತನಾಡುತ್ತಿಲ್ಲ ಅಂದರೆ ಆ ಪಕ್ಷದ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಏನೆಂದು ಮೊತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.