ಮನೆ ಉದ್ಯೋಗ ಏ.15 ರಿಂದ ಕೆಎಸ್ಒಯುನಲ್ಲಿ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ

ಏ.15 ರಿಂದ ಕೆಎಸ್ಒಯುನಲ್ಲಿ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ

0

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್ಒಯು)ದ ವತಿಯಿಂದ ಶನಿವಾರದಿಂದ(ಏಪ್ರಿಲ್ 15 ) 15 ದಿನಗಳ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

Join Our Whatsapp Group

ಈ ಮೆಗಾ ವರ್ಚುವಲ್ ಉದ್ಯೋಗ ಮೇಳದಲ್ಲಿ ಸುಮಾರು 2,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 10ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆಎಸ್ ಒಯು ಉಪಕುಲಪತಿ ಪ್ರೊ.ಶರಣಪ್ಪ ವಿ ಹಾಲ್ಸೆ, ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳ ಮುಕ್ತ ಅವಕಾಶ ನೀಡುತ್ತಿದೆ ಎಂದರು.