ಮನೆ ಮನರಂಜನೆ ನಾಳೆ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗಲಿವೆ ಎಂಬ ಮಾಹಿತಿ ಇಲ್ಲಿದೆ

ನಾಳೆ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗಲಿವೆ ಎಂಬ ಮಾಹಿತಿ ಇಲ್ಲಿದೆ

0

ಒಂದೆಡೆ ಚುನಾವಣೆಯ ರಂಗು ಜೋರಾಗಿದೆ. ಮತ್ತೊಂದೆಡೆ ಐಪಿಎಲ್​ ಪಂದ್ಯಗಳ ಸಂಭ್ರಮ ಮನೆ ಮಾಡಿದೆ. ಈ ನಡುವೆ ಚಿತ್ರರಂಗದವರು ಸುಮ್ಮನೆ ಕೂತಿಲ್ಲ. ಪ್ರತಿ ವಾರದಂತೆ ಈ ವಾರ ಕೂಡ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡುವ ಪದ್ಧತಿ ಮುಂದುವರಿದಿದೆ.

Join Our Whatsapp Group

ಏಪ್ರಿಲ್​ 14ರಂದು ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ರಮೇಶ್​ ಅರವಿಂದ್​ ಅವರು ‘ಶಿವಾಜಿ ಸುರತ್ಕಲ್​ 2’ ಚಿತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ.

ಹಾಸ್ಯ ನಟ ಕೋಮಲ್​ ಅವರು ‘ಉಂಡೇನಾಮ’ ಮೂಲಕ ನಗುವಿನ ಕಚಗುಳಿ ಇಡಲಿದ್ದಾರೆ.

ಅಷ್ಟೇ ಅಲ್ಲದೇ, ಇನ್ನೂ ಕೆಲವು ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಟಾಲಿವುಡ್​ ನಲ್ಲಿ ‘ಶಾಕುಂತಲಂ’ ಸಿನಿಮಾ ತೆರೆಗೆ ಬರುತ್ತಿದೆ. ಸಸ್ಪೆನ್ಸ್​ ಥ್ರಿಲ್ಲರ್​, ಕಾಮಿಡಿ, ಪೌರಾಣಿಕ.. ಹೀಗೆ ಹಲವು ಪ್ರಕಾರದ ಸಿನಿಮಾಗಳು ಈ ವಾರ ಚಿತ್ರಮಂದಿರದಲ್ಲಿ ಸದ್ದು ಮಾಡಲಿವೆ.

‘ಶಿವಾಜಿ ಸುರತ್ಕಲ್​ 2’:

ರಮೇಶ್ ಅರವಿಂದ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದದವರು ನಟಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.