ಮನೆ ಮನರಂಜನೆ ನಟ ವಿಕ್ಟರಿ ವೆಂಕಟೇಶ್ ಅವರ 75ನೇ ಬಹುಭಾಷಾ ಸಿನಿಮಾ ‘ಸೈಂಧವ್’ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಆಯ್ಕೆ

ನಟ ವಿಕ್ಟರಿ ವೆಂಕಟೇಶ್ ಅವರ 75ನೇ ಬಹುಭಾಷಾ ಸಿನಿಮಾ ‘ಸೈಂಧವ್’ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಆಯ್ಕೆ

0

‘ಯೂಟರ್ನ್’ ಸಿನಿಮಾ ಮೂಲಕ ಜನಪ್ರಿಯರಾಗಿದ್ದ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗು ನಟ ವಿಕ್ಟರಿ ವೆಂಕಟೇಶ್ ಅವರ 75ನೇ ಬಹುಭಾಷಾ ಸಿನಿಮಾ ‘ಸೈಂಧವ್’ಗೆ ನಾಯಕಿಯಾಗಿ ಶ್ರದ್ಧಾ ಆಯ್ಕೆಯಾಗಿದ್ದಾರೆ.

Join Our Whatsapp Group

ಶೈಲೇಶ್ ಕೋಲನು ನಿರ್ದೇಶನದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್‌ಗೆ ಜೋಡಿಯಾಗಿ ನಟಿಸುತ್ತಿರುವ ಶ್ರದ್ಧಾ ಅವರ ಮೊದಲ ನೋಟ ಬಿಡುಗಡೆ ಮಾಡಲಾಗಿದೆ.
‘ಸೈಂಧವ್’ ಸಿನಿಮಾದಲ್ಲಿ ಶ್ರದ್ಧಾ ಮನೋಜ್ಞಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್‌ ಗಮನಸೆಳೆಯುತ್ತಿದೆ. ‘ಜೆರ್ಸಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಕನ್ನಡದ ಜತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿದ್ದಾರೆ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ‌ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್. ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ‌ವಿದೆ. ಈ ವರ್ಷ ಕ್ರಿಸ್‌ಮಸ್‌ ವೇಳೆಗೆ ಚಿತ್ರ ತೆರೆಗೆ ಬರಲಿದೆ.