ಮನೆ ರಾಷ್ಟ್ರೀಯ ಗೋವಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆ: ಇಬ್ಬರು ರಷ್ಯನ್ನರ ಬಂಧನ

ಗೋವಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆ: ಇಬ್ಬರು ರಷ್ಯನ್ನರ ಬಂಧನ

0

ಪಣಜಿ: ಗೋವಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ದಂಧೆಯನ್ನು ಭೇದಿಸಿರುವ ಎನ್’ಸಿಬಿ, ಇಬ್ಬರು ರಷ್ಯನ್ನರನ್ನು ಬಂಧಿಸಿದೆ.

Join Our Whatsapp Group

1980 ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಈಜುಗಾರ್ತಿ,  ಮಾಜಿ ಪೊಲೀಸ್ ಮತ್ತು ಒಬ್ಬ ಭಾರತೀಯನನ್ನ ಬಂಧಿಸಿ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.

ರಷ್ಯಾದ ಡ್ರಗ್ ದಂಧೆ ಗೋವಾದ ಅರಂಬೋಲ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸುಳಿವು ಆಧರಿಸಿ, ಕಳೆದ ಎರಡು ವಾರಗಳಿಂದ ಎನ್ಸಿಬಿಯ ಗೋವಾ ಘಟಕ ಕಾರ್ಯಾಚರಣೆ ನಡೆಸಿದೆ.

ಗುಪ್ತಚರ ಮಾಹಿತಿಯ ಪ್ರಕಾರ, ಎಸ್ ವರ್ಗನೋವಾ ಎಂಬ ರಷ್ಯಾದ ಮಹಿಳೆ ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದು, ತನಿಖೆಯ ಸಮಯದಲ್ಲಿ, ಆಕಾಶ್ ಎಂಬ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿ ಪೂರಕ ಮಾಹಿತಿಯನ್ನು ಸಹ ನಾವು ಸ್ವೀಕರಿಸಿದ್ದೇವೆ ಎಂದು ಎನ್’ಸಿಬಿಬಿ ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ತನಿಖೆಯ ಸಮಯದಲ್ಲಿ, ಆಕಾಶ್ ದೊಡ್ಡ ನೆಟ್ವರ್ಕ್’ನ ಭಾಗವಾಗಿದ್ದಾನೆ ಮತ್ತು ಅವನು ಕಾರ್ಟೆಲ್ ನ ಕಿಂಗ್ ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಷ್ಯಾದ ವ್ಯಕ್ತಿಯ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.