ಮನೆ ರಾಷ್ಟ್ರೀಯ ಅಧಿಕ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ಜೂನ್ 26 ರವರೆಗೆ ವಿಸ್ತರಣೆ

ಅಧಿಕ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ಜೂನ್ 26 ರವರೆಗೆ ವಿಸ್ತರಣೆ

0

ನವದೆಹಲಿ: ಪಿಎಫ್ ಸದಸ್ಯರು ಅಧಿಕ ಪಿಂಚಣಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನೀಡಿದ್ದ ಮೇ 3ರ ವರೆಗಿನ ಗಡುವನ್ನು ಜೂನ್ 26ರವರೆಗೂ ವಿಸ್ತರಿಸಲಾಗಿದೆ.

Join Our Whatsapp Group

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಇಪಿಎಫ್’​ಒ, ಎಲ್ಲಾ ಅರ್ಹ ವ್ಯಕ್ತಿಗಳೂ ತಮ್ಮ ಅರ್ಜಿ ಸಲ್ಲಿಸಲು ಅನುಕೂಲವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಹೆಚ್ಚುವರಿ ಪಿಂಚಣಿ ಸೌಲಭ್ಯ ಪಡೆಯಲು ಇಲ್ಲಿಯವರೆಗೂ 12ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿರುವುದು ತಿಳಿದುಬಂದಿದೆ. ಇನ್ನೂ ಬಹಳ ಮಂದಿ ಅರ್ಹರು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗಡುವು ವಿಸ್ತರಿಸಬೇಕೆಂಬ ಒತ್ತಾಯ ಬಹಳ ಕಡೆಯಿಂದ ಬಂದಿತ್ತೆನ್ನಲಾಗಿದೆ.

2022ರ ನವೆಂಬರ್ 4ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಿಎಫ್ ಸದಸ್ಯರಿಂದ ಅರ್ಜಿ ಸ್ವೀಕರಿಸಲು ಇಪಿಎಫ್​ಒ ವ್ಯವಸ್ಥೆ ಮಾಡಿದೆ ಎಂದು ಕಾರ್ಮಿಕ ಸಚಿವಾಲಯ ಕೂಡ ಹೇಳಿಕೆ ನೀಡಿದೆ.