ಮನೆ ರಾಷ್ಟ್ರೀಯ 103ನೇ ವಯಸ್ಸಿನಲ್ಲಿ ಮತದಾನ ಮಾಡಿದ ಬೆಳಗಾವಿಯ ಮಹಾದೇವ ಮಾಲಿಂಗ ಮಾಳಿಯವರಿಗೆ ಪ್ರಧಾನಿ ಮೋದಿ ಪ್ರಶಂಸೆ

103ನೇ ವಯಸ್ಸಿನಲ್ಲಿ ಮತದಾನ ಮಾಡಿದ ಬೆಳಗಾವಿಯ ಮಹಾದೇವ ಮಾಲಿಂಗ ಮಾಳಿಯವರಿಗೆ ಪ್ರಧಾನಿ ಮೋದಿ ಪ್ರಶಂಸೆ

0

ಬೆಳಗಾವಿ: ತಮ್ಮ 103ನೇ ವಯಸ್ಸಿನಲ್ಲಿಯೂ ಮತದಾನ ಮಾಡಿರುವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಹಾದೇವ ಮಾಲಿಂಗ ಮಾಳಿ ಎಂಬುವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿ

Join Our Whatsapp Group

ಇವರು ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿರಿಯ ಮತದಾರ ಎನ್ನಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, 80 ವರ್ಷ ಮೀರಿದ ವಯೋವೃದ್ಧರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆ ಸೌಲಭ್ಯದಡಿ, ಮಾಳಿ ಅವರು ಮತ ಚಲಾಯಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಮಾಳಿ ಅವರನ್ನು ಪ್ರಧಾನಿ ಮೋದಿಯವರು ಅಭಿನಂದಿಸಿದ್ದು, ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಶ್ರೀ ಮಹದೇವ ಮಹಲಿಂಗ ಮಾಳಿಯವರು ಪ್ರಜಾಪ್ರಭುತ್ವಕ್ಕೆ ತಮ್ಮ ಕೈಲಾದ ಶಕ್ತಿಯನ್ನು ತುಂಬುವಲ್ಲಿ ಪ್ರಯತ್ನಿಸಿದ್ದಾರೆ. ಆ ಮೂಲಕ ಅವರು ಅನೇಕ ಜನರಿಗೆ ಅವರು ಮಾದರಿಯಾಗಿದ್ದಾರೆ. ಕರ್ನಾಟಕ ರಾಜ್ಯವು ಎಂದಿಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದ್ದು, ಅದು ಕರ್ನಾಟಕ ಜನರ ಸಂಸ್ಕೃತಿಯ ಭಾಗವೇ ಆಗಿದೆ. ಮಾಳಿಯವರ ಸ್ಫೂರ್ತಿಯುತ ನಡೆ ಕೂಡ ಅದೇ ಸಂಸ್ಕೃತಿಯ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಮಾಳಿಯವರಿಗೆ ಈಗ 103 ವರ್ಷ, 4 ತಿಂಗಳು. ಅವರು ಮತದಾನ ಮಾಡಿರುವುದನ್ನು ಕೇಂದ್ರ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಕೂಡ ಶ್ಲಾಘಿಸಿದ್ದರು. ಮಾಳಿಯವರ ಮತದಾನದ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಮಾಳಿಯವರ ಮನೆಯವರಿಗೆ ಪೋನ್ ಮಾಡಿದ ರಾಜೀವ್ ಕುಮಾರ್, ಮಾಳಿಯವರ ಜೊತೆಗೆ ಮಾತನಾಡಿದ್ದರು. ನಿಮ್ಮ ನಡೆಯು ನಿಜಕ್ಕೂ ಶ್ಲಾಘನೀಯ. ಅನೇಕ ಯುವ ಮತದಾರರಿಗೆ, ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿರುವ ಮತದಾರರಿಗೆ ನೀವು ಸ್ಫೂರ್ತಿಯಾಗಿದ್ದೀರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹಿಂದಿನ ಲೇಖನಅಧಿಕ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ಜೂನ್ 26 ರವರೆಗೆ ವಿಸ್ತರಣೆ
ಮುಂದಿನ ಲೇಖನಕಾಂಗ್ರೆಸ್​ ರಾಜ್ಯವನ್ನು ಎಟಿಎಂ ಮಾಡಬೇಕೆಂದಿದೆ: ಪ್ರಧಾನಿ ಮೋದಿ