ಮನೆ ಮನರಂಜನೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ಥಾರ್ ಕಾರು​ ಗಿಫ್ಟ್ ನೀಡಿದ ನಟ ಸುದೀಪ್

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ಥಾರ್ ಕಾರು​ ಗಿಫ್ಟ್ ನೀಡಿದ ನಟ ಸುದೀಪ್

0

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ನಟ ಸುದೀಪ್​ ಮಹಿಂದ್ರಾ ಥಾರ್ ಕಾರು ಗಿಫ್ಟ್​ ನೀಡಿದ್ದು, ಈ ಫೋಟೋವನ್ನು ಜಾನಿ ಮಾಸ್ಟರ್ ಹಂಚಿಕೊಂಡಿದ್ದಾರೆ.

ಸ್ನೇಹಿತ ಹಾಗೂ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್​ಗೆ ಸುದೀಪ್,​ ಮಹಿಂದ್ರಾ ಥಾರ್ ಕಾರನ್ನು ಉಡುಗೊರೆಯಾಗಿ​ ನೀಡಿದ್ದಾರೆ. ಜಾನಿ ಮಾಸ್ಟರ್​ ಕನ್ನಡ ಚಿತ್ರರಂಗದ ಜೊತೆ ಉತ್ತಮವಾದ ಬಾಂಧವ್ಯ ಹೊಂದಿದ್ದು, ಪುನೀತ್​ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟಸಾರ್ವಭೌಮ,ಯುವರತ್ನ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುವ ಮೂಲಕ‌ ಸೈ ಎನಿಸಿಕೊಂಡಿದ್ದಾರೆ.

ಸುದೀಪ್ ಅಭಿನಯದ ಬಹು‌‌ ನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಡ್ಯಾನ್ಸ್ ಅಂದ್ರೆ ಬೇಜಾರು ಮಾಡಿಕೊಳ್ಳುವ ಸುದೀಪ್​ಗೆ ಚಿತ್ರದಲ್ಲಿ ಜಾನಿ ಮಾಸ್ಟರ್​ ನೃತ್ಯ ಮಾಡಿಸಿರೋದು ವಿಶೇಷ.

ಕಾರ್ ನೊಂದಿಗಿನ ಫೋಟೋ ಹಂಚಿಕೊಂಡಿರುವ ಜಾನಿ ಮಾಸ್ಟರ್ ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಕಿಚ್ಚ ಸುದೀಪ್ ಸಾರ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ ಎಂದಿದ್ದಾರೆ.  ಕಿಚ್ಚನ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.