ಐಪಿಎಲ್’ನ 56ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಆರ್’ಸಿಬಿ ಪಾಲಿಗೂ ನಿರ್ಣಾಯಕ ಎಂಬುದು ವಿಶೇಷ.
ಅಂದರೆ ಐಪಿಎಲ್ ಪ್ಲೇಆಫ್ ರೇಸ್’ನಲ್ಲಿ ಕೆಕೆಆರ್, ಆರ್’ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡಗಳಿವೆ. ಆದರೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆಲ್ಲುವುದರಿಂದ ಅದು ಆರ್’ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಏಕೆಂದರೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಇಂದು ಗೆದ್ದರೆ 4ನೇ ಸ್ಥಾನಕ್ಕೇರಬಹುದು. ಒಂದು ವೇಳೆ ಸೋತರೆ ಆರ್’ಸಿಬಿ ತಂಡದ ಪ್ಲೇಆಫ್ ಕನಸು ಮತ್ತಷ್ಟು ಜೀವಂತವಾಗಿರಲಿದೆ. ಏಕೆಂದರೆ ಆರ್’ಸಿಬಿ ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್.
ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಕೆಕೆಆರ್ ಹಾಗೂ ಆರ್’ಸಿಬಿ ವಿರುದ್ಧ ಸೋತರೆ ಪ್ಲೇಆಫ್ ರೇಸ್’ನಿಂದ ಹೊರಬೀಳುವುದು ಖಚಿತ. ಅತ್ತ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು.
ಮತ್ತೊಂದೆಡೆ ಸಿಎಸ್’ಕೆ ತಂಡವು ಮುಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಸಿಎಸ್’ಕೆ ತಂಡದ ಮುಂದಿನ ಎದುರಾಳಿ ಕೆಕೆಆರ್. ಅತ್ತ ಕೆಕೆಆರ್ ತಂಡವನ್ನು ಸಿಎಸ್’ಕೆ ಸೋಲಿಸಿದರೆ, ಆರ್’ಸಿಬಿ ಹಾದಿ ಸುಗಮವಾಗಲಿದೆ.
ಏಕೆಂದರೆ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಂದಿನ 3 ಪಂದ್ಯಗಳಲ್ಲಿ 1 ರಲ್ಲಿ ಸೋತು, 2 ಪಂದ್ಯಗಳನ್ನು ಗೆದ್ದರೂ ಒಟ್ಟು 14 ಪಾಯಿಂಟ್ಸ್ ಮಾತ್ರ ಆಗಲಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಕೂಡ 1 ಪಂದ್ಯದಲ್ಲಿ ಸೋಲುವುದನ್ನು ಎದುರು ನೋಡಬೇಕು. ಇದರಿಂದ ಕೊನೆಯ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ 16 ಪಾಯಿಂಟ್ಸ್ಗಳೊಂದಿಗೆ ಪ್ಲೇಆಫ್’ಗೆ ಪ್ರವೇಶಿಸುವ ಅವಕಾಶವನ್ನು ಆರ್’ಸಿಬಿ ಹೊಂದಿರಲಿದೆ.
ಈ ಎಲ್ಲಾ ಲೆಕ್ಕಚಾರದಂತೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆಲ್ಲಬೇಕು. ಇದರಿಂದ ಆರ್ಆರ್ ತಂಡದ 16 ಪಾಯಿಂಟ್ಸ್’ಗಳಿಸುವ ಅವಕಾಶ ಅಂತ್ಯವಾಗಲಿದೆ. ಇತ್ತ ಆರ್’ಸಿಬಿ 16 ಪಾಯಿಂಟ್ಸ್ಗಳ ಟಾರ್ಗೆಟ್’ನೊಂದಿಗೆ ಆರ್’ಸಿಬಿ ಪ್ಲೇಆಫ್’ಗೆ ಪ್ರವೇಶಿಸುವ ಅವಕಾಶ ಇಮ್ಮಡಿಯಾಗಲಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.