ಮನೆ ರಾಜ್ಯ ಮೈಸೂರು ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರು: ಹಣ, ಬೈಕ್, ಜೊತೆಗೆ ಫಸಲನ್ನೆ ಇಟ್ಟರು

ಮೈಸೂರು ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರು: ಹಣ, ಬೈಕ್, ಜೊತೆಗೆ ಫಸಲನ್ನೆ ಇಟ್ಟರು

0

ಮೈಸೂರು: ಜಿಲ್ಲೆಯ ವಿವಿಧೆಡೆ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್ ನಡೆಸುತ್ತಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ಹೆಚ್ಚಿನ ಬೆಟ್ಟಿಂಗ್ ನಡೆದಿದೆ.

Join Our Whatsapp Group

ಉಳಿದಂತೆ ತಿ.ನರಸೀಪುರ, ಕೆ.ಆರ್.ನಗರದಲ್ಲಿ ಹಣ, ಬೈಕ್, ಮೇಕೆಯನ್ನೇ ಬೆಟ್ಟಿಂಗ್’ಗೆ ಕಟ್ಟುತ್ತಿದ್ದಾರೆ. ಕೆ.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್ ಪರ ಅಭ್ಯರ್ಥಿಯೊಬ್ಬರು 5 ಲಕ್ಷದವರೆಗೂ ಬೆಟ್ಟಿಂಗ್ ಮಾಡಿದ್ದು, ಪ್ರತಿಸ್ಪರ್ಧಿಗಳು ಅಷ್ಟೇ ಮೊತ್ತ ನೀಡಲು ಹಿಂದೇಟು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಡಿಯೊ ಹರಿದಾಡುತ್ತಿದೆ. ತಿ.ನರಸೀಪುರದಲ್ಲಿ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳ ಪರ ದೊಡ್ಡ ಮೊತ್ತದ ಬೆಟ್ಟಿಂಗ್ ನಡೆದಿದೆ. ತಲಕಾಡು ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಮೆಕ್ಕೆಜೋಳದ ಫಸಲನ್ನೇ ಬೆಟ್ಟಿಂಗ್ ಗೆ ಇಟ್ಟಿದ್ದಾರೆ.