ಮನೆ ರಾಜ್ಯ ಕೊಳ್ಳೇಗಾಲ: ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಗೆ ಸೋಲು, ಕಾಂಗ್ರೆಸ್’ನ ಎ.ಆರ್.ಕೃಷ್ಣಮೂರ್ತಿಗೆ ಗೆಲುವು

ಕೊಳ್ಳೇಗಾಲ: ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಗೆ ಸೋಲು, ಕಾಂಗ್ರೆಸ್’ನ ಎ.ಆರ್.ಕೃಷ್ಣಮೂರ್ತಿಗೆ ಗೆಲುವು

0

ಚಾಮರಾಜನಗರ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಅವರು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದು, ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಹೀನಾಯ ಸೋಲು ಅನುಭವಿಸಿದ್ದಾರೆ.

Join Our Whatsapp Group

18ನೇ ಸುತ್ತಿನೊಂದಿಗೆ, ಮತಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೃಷ್ಣಮೂರ್ತಿ 1,07,380 ಮತಗಳನ್ನು ಪಡೆದಿದ್ದಾರೆ.

ಬಿಜೆಪಿಯ ಎನ್.ಮಹೇಶ್ 48,403 ಮತಗಳನ್ನು ಗಳಿಸಿದ್ದಾರೆ. ಅಂಚೆ ಮತಗಳ ವಿವರ ಇನ್ನಷ್ಟೇ ಸಿಗಬೇಕಿದ್ದು, 58 ಸಾವಿರಕ್ಕೂ ಹೆಚ್ಚು ಮತಗಳಿಂದ ಕೃಷ್ಣಮೂರ್ತಿ ಗೆಲುವು ಸಾಧಿಸಿದ್ದಾರೆ.

 ಜೆಡಿಎಸ್ ನ ಬಿ.ಪುಟ್ಟಸ್ವಾಮಿ ಅವರು 3,855 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ