ಮನೆ ಕ್ರೀಡೆ ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ  ಗುಜರಾತ್​ ಟೈಟನ್ಸ್

ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ  ಗುಜರಾತ್​ ಟೈಟನ್ಸ್

0

ಐಪಿಎಲ್​ ಟೂರ್ನಿಯಲ್ಲಿ ಗುಜರಾತ್​ ಟೈಟನ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದು, 16 ಪಾಯಿಂಟ್ಸ್​ ಪಡೆದು ಮೊದಲ ಸ್ಥಾನದಲ್ಲಿದೆ.

Join Our Whatsapp Group

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಕಳೆದ ಐಪಿಎಲ್ ಸೀಸನ್​’ನಲ್ಲಿ ಎಂಟ್ರಿಯಾಗಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಸದ್ಯ ಇದೀಗ ಇವತ್ತು ಹೈದರಾಬಾದ್ ವಿರುದ್ಧ ಪಂದ್ಯವಾಡುತ್ತಿದ್ದು, ಗುಲಾಬಿ ಬಣ್ಣದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಇಳಿಯಲಿದ್ದಾರೆ.

 ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್​​ ತಂಡ ಪ್ರಸಕ್ತ ಐಪಿಎಲ್​​​’ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದೆ.  ಇಂದು ಸನ್’​ರೈಸರ್ಸ್​ ಹೈದರಾಬಾದ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗುಜರಾತ್​​​​​​ ತಂಡ ಪಿಂಕ್​​​​ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಕ್ಯಾನ್ಸರ್ ವಿರುದ್ಧ ಜಾಗೃತ ಮೂಡಿಸುವ ಸಲುವಾಗಿ ಪಿಂಕ್ ಜೆರ್ಸಿ ತೊಟ್ಟು ಆಡಲು ನಿರ್ಧರಿಸಿದೆ.