ಮನೆ ಅಪರಾಧ ಆಟೋ ರಿಕ್ಷಾ- ಲಾರಿ ನಡುವೆ ಅಪಘಾತ: 6 ಮಹಿಳಾ ಕಾರ್ಮಿಕರು ಸಾವು

ಆಟೋ ರಿಕ್ಷಾ- ಲಾರಿ ನಡುವೆ ಅಪಘಾತ: 6 ಮಹಿಳಾ ಕಾರ್ಮಿಕರು ಸಾವು

0

ಆಂಧ್ರ ಪ್ರದೇಶ: ಲಾರಿ – ಆಟೋ ರಿಕ್ಷಾ ನಡುವಿನ ಭೀಕರ ಅಪಘಾತದಲ್ಲಿ 6  ಮಂದಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

Join Our Whatsapp Group

ಗುಡೂರು ಕಡೆಯಿಂದ ಬರುತ್ತಿದ್ದ ಲಾರಿ ತೆಲಂಗಾಣದ ನಲ್ಗೊಂಡ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿದ್ದ 6 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಇನ್ನು 6 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಮಾಡಿ ಲಾರಿ ಸ್ಥಳದಿಂದ ಪರಾರಿಯಾಗಿದೆ ಎಂದು ವರದಿ ತಿಳಿಸಿದೆ.

ಮೃತ ಮಹಿಳಾ ಕಾರ್ಮಿಕರು ಮೆಣಸಿನಕಾಯಿ ಕೊಯ್ಲು ಕೆಲಸಕ್ಕಾಗಿ ಪಲ್ನಾಡು ಜಿಲ್ಲೆಯ ಪುಲಿಪಾಡು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸದ್ಯ ಪರಾರಿಯಾದ  ಲಾರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.