ಮನೆ ಮನರಂಜನೆ ರಜನಿಕಾಂತ್ ಸಿನಿಮಾ ‘ಲಾಲ್ ಸಲಾಮ್’ ನಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಟನೆ

ರಜನಿಕಾಂತ್ ಸಿನಿಮಾ ‘ಲಾಲ್ ಸಲಾಮ್’ ನಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಟನೆ

0

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಬಹಳ ದಿನಗಳ ಸಿನಿಮಾ ನಿರ್ದೇಶನಕ್ಕೆ ಮರಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Join Our Whatsapp Group

‘ಲಾಲ್ ಸಲಾಮ್’ ಎಂಬ ಸಿನಿಮಾವನ್ನು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡುತ್ತಿದ್ದು, ತಮಿಳು ನಟರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಅವರು ಕೂಡ ‘ಲಾಲ್ ಸಲಾಮ್’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಚಿತ್ರತಂಡ ಶೇರ್ ಮಾಡಿಕೊಂಡಿದೆ.

ರಜನಿಕಾಂತ್ ಮತ್ತು ಕಪಿಲ್ ದೇವ್ ಅವರು ಭಾಗಿಯಾಗಿದ್ದ ದೃಶ್ಯಗಳ ಚಿತ್ರೀಕರಣವನ್ನು ಮುಂಬೈನಲ್ಲಿ ಮಾಡಲಾಗಿದೆ.

​ಇದು ನನಗೆ ಹೆಮ್ಮೆ ಎಂದ ರಜನಿಕಾಂತ್​

‘ಭಾರತವು ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಹೆಮ್ಮೆ ಪಡುವಂತೆ ಮಾಡಿದವರು, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ಮಾನವ ಕಪಿಲ್ ದೇವ್ ಅವರಂತಹ ಲೆಜೆಂಡ್ ಜತೆಗೆ ಕೆಲಸ ಮಾಡುವುದು ನನಗೆ ಹೆಮ್ಮೆಯ ವಿಚಾರವಾಗಿದೆ’ ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ.

​​ಅಪ್ಪನಿಗೆ ಮಗಳ ನಿರ್ದೇಶನ​

ಐಶ್ವರ್ಯಾ ರಜನಿಕಾಂತ್ ಅವರು ಈ ಹಿಂದೆ ಮಾಜಿ ಪತಿ ಧನುಷ್ ನಾಯಕತ್ವದ ‘3’ ಹಾಗೂ ‘ವೈ ರಾಜ ವೈ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಇದೀಗ ಲಾಲ್ ಸಲಾಮ್ ಸಿನಿಮಾದಲ್ಲಿ ಮೊದಲ ಬಾರಿಗೆ ತಂದೆಗೆ ನಿರ್ದೇಶನ ಮಾಡುತ್ತಿದ್ದಾರೆ.