ಮನೆ ರಾಜ್ಯ ಜಮೀನಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಆನೆ ಮೃತದೇಹ ಪತ್ತೆ: ಅಧಿಕಾರಿಗಳಿಂದ ಪರಿಶೀಲನೆ

ಜಮೀನಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಆನೆ ಮೃತದೇಹ ಪತ್ತೆ: ಅಧಿಕಾರಿಗಳಿಂದ ಪರಿಶೀಲನೆ

0

ಕೊಳ್ಳೇಗಾಲ: ಬೆಟ್ಟದ ತಪ್ಪಲಿನಲ್ಲಿರುವ ಜಮೀನೊಂದರಲ್ಲಿ ಗಂಡಾನೆಯೊಂದು ಶನಿವಾರ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆಯೊಂದು ತಾಲ್ಲೂಕಿನ ಜಾಗೇರಿ ಸಮೀಪದ ಆರ್. ಬಿ. ತಾಂಡದಲ್ಲಿ ಸಂಭವಿಸಿದೆ.

Join Our Whatsapp Group

ಗ್ರಾಮದ ಗೋವಿಂದ ನಾಯ್ಕ ಎಂಬವರಿಗೆ ಸೇರಿದ ಜಮೀನಿನಲ್ಲಿ ಸುಮಾರು 20 ವರ್ಷದ ಗಂಡಾನೆ ಅನುಮಾನಸ್ಪದವಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ.

ರೈತರು ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದಾಗ ಆನೆಯ ಮೃತದೇಹ ಪತ್ತೆಯಾಗಿದೆ, ಇದನ್ನು ಕಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆರ್ ಆಫ್ ಓ. ಭರತ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.