ಮನೆ ಹವಮಾನ ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ: ಹವಮಾನ ಇಲಾಖೆ

ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ: ಹವಮಾನ ಇಲಾಖೆ

0

ಬೆಂಗಳೂರು: ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Join Our Whatsapp Group


ಬೆಂಗಳೂರಲ್ಲೂ ಐದು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ. ಕೊನೆಯ ಮೂರು ದಿನ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ 17 ಜಿಲ್ಲೆಗಳ ಬಹುತೇಕ ಕಡೆ ಜೋರು ಮಳೆ ಸಾಧ್ಯತೆ ಇದೆ. ಗಾಳಿ ಕೂಡ 40-50 ಕಿ.ಮೀ ವೇಗದಲ್ಲಿ ಬೀಸಲಿದೆ. ಉತ್ತರ ಒಳನಾಡು, ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಗುಡುಗು ಮಿಂಚು ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಗರದಲ್ಲಿ ಪ್ರತಿ ದಿನ ಬೆಳಗ್ಗೆ ಎಂದಿನಂತೆ ಬಿಸಿಲು ಕಂಡು ಬರುತ್ತದೆ. ಸಂಜೆ ಹೊತ್ತಿಗೆ ಇಲ್ಲವೇ ಸಂಜೆ ನಂತರ ತಡರಾತ್ರಿವರೆಗೆ ಜೋರು ಮಳೆ ಸುರಿದು ಹಲವು ಆವಾಂತರಗಳನ್ನು ಸೃಷ್ಟಿಸುತ್ತಿದೆ. ಗುರುವಾರ ವರೆಗೆ ಸಂಜೆ ನಂತರ ನಗರದ ಹಲವೆಡೆ ವ್ಯಾಪಕ ಮಳೆಯ ಆಗಮನವಾಗಲಿದೆ. ಒಳಚರಂಡಿ ಉಕ್ಕಿ ಹರಿಯುವ ಕಡೆ, ರಸ್ತೆ ಅಂಡರ್‌ ಪಾಸ್, ರೈಲ್ವೆ ಅಂಡರ್‌ ಪಾಸ್‌ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.