ಮನೆ ರಾಷ್ಟ್ರೀಯ ನದಿಗೆ ಉರುಳಿದ ಕಾರು: ಮೂವರ ಸಾವು, ಆರು ಮಂದಿಗೆ ಗಾಯ

ನದಿಗೆ ಉರುಳಿದ ಕಾರು: ಮೂವರ ಸಾವು, ಆರು ಮಂದಿಗೆ ಗಾಯ

0

ನಾಸಿಕ್‌: ಕಾರು ನದಿಗೆ ಉರುಳಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸಹಿತ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ.

Join Our Whatsapp Group

ಒಂದೇ ಕುಟುಂಬದ 10 ಸದಸ್ಯರಿದ್ದ ಕಾರು ಜಾಲಾ°ದಿಂದ ಮಾಲೆಗಾಂವ್‌ಗೆ ತೆರಳುತ್ತಿದ್ದಾಗ ನಂದಗಾಂವ್‌ ತಾಲೂಕಿನ ಪಂಜಾನ್‌ ನದಿ ಸೇತುವೆಯ ಮೇಲೆ ಮುಂಜಾನೆ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮನ್ಸೂರಿ ಕುಟುಂಬದ ಮೂವರು ಸದಸ್ಯರಾದ ಡಾ| ಯಾಕೂಬ್‌ ರಂಜಾನ್‌ ಮನ್ಸೂರಿ (50), ಅಫ್ರೋಜ್ ಅಬ್ದುಲ್ ಲತೀಫ್ (35) ಮತ್ತು ಶಿಫಾ (4) ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಡಾ| ಮನ್ಸೂರಿ ಅವರು ನಿದ್ದೆಗೆ ಜಾರಿದ ಪರಿಣಾಮ ಕಾರು ಪಂಜಾನ್‌ ನದಿಗೆ ಉರುಳಿದೆ. ಗಾಯಾಳುಗಳು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.