ಮನೆ ಅಪರಾಧ ಮಂಗಳೂರು: ಮೂಡ ಕಚೇರಿ ಸಿಬ್ಬಂದಿ ಸ್ಟೋರ್ ರೂಮ್ ನಲ್ಲೇ ಆತ್ಮಹತ್ಯೆ

ಮಂಗಳೂರು: ಮೂಡ ಕಚೇರಿ ಸಿಬ್ಬಂದಿ ಸ್ಟೋರ್ ರೂಮ್ ನಲ್ಲೇ ಆತ್ಮಹತ್ಯೆ

0

ಮಂಗಳೂರು: ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಸಿಬ್ಬಂದಿಯೋರ್ವರು ತಮ್ಮ ಕಚೇರಿ ಸ್ಟೋರ್ ರೂಮ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 2 ಮಧ್ಯಾಹ್ನ ನಡೆದಿದೆ.

Join Our Whatsapp Group

ಪಡೀಲ್ ನಿವಾಸಿ, ಮೂಡ ಕಚೇರಿ ಸಿಬ್ಬಂದಿ ಕೀರ್ತಿ ಕುಮಾರ್ (36) ಆತ್ಮಹತ್ಯೆ ಮಾಡಿಕೊಂಡವರು.

ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಸ್ ಡಿಎ ಸಿಬಂದಿಯಾಗಿರುವ ಕೀರ್ತಿ ಇಂದು ಬೆಳಗ್ಗೆ ಎಂದಿನಂತೆ ಕಚೇರಿಗೆ ಬಂದಿದ್ದರು. ಮಧ್ಯಾಹ್ನ ವೇಳೆ ನೇಣುಬಿಗಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.