ಮನೆ ಮನರಂಜನೆ ಗಾಡ್ ಫಾದರ್ ಚಿತ್ರದ ಲಿರಿಕಲ್ ಹಾಡು ಬಿಡುಗಡೆ

ಗಾಡ್ ಫಾದರ್ ಚಿತ್ರದ ಲಿರಿಕಲ್ ಹಾಡು ಬಿಡುಗಡೆ

0

ಹೈದರಾಬಾದ್‌(Hydarabad): ತೆಲುಗಿನ ‘ಮೆಗಾ ಸ್ಟಾರ್’ಚಿರಂಜೀವಿ ನಟನೆಯ ‘ಗಾಡ್ ಫಾದರ್’ ಸಿನಿಮಾದ ಲಿರಿಕಲ್‌ ಹಾಡು ಬಿಡುಗಡೆಯಾಗಿದೆ.

ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಕೂಡ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಇಬ್ಬರು ‘ಥಾರ್ ಮಾರ್ ಥಕ್ಕರ್ ಮಾರ್..’ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೊ ಬಿಡುಗಡೆ ಮಾಡಲಾಗಿದೆ.

ಈ ಹಾಡಿಗೆ ನೃತ್ಯ ನಿರ್ದೇಶನವನ್ನು ಸರಿಯಾಗಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹೇಳುತ್ತಿದ್ದಾರೆ. ಸಂಗೀತ ಚೆನ್ನಾಗಿರುವ ಹಾಡಿಗೆ ನೃತ್ಯ ನಿರ್ದೇಶನವನ್ನು ಸರಿಯಾಗಿ ಮಾಡಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

ಈಗ ಬಿಡುಗಡೆ ಮಾಡಿರುವುದು ಲಿರಿಕಲ್‌ ವಿಡಿಯೊ ಮಾತ್ರ, ಮುಂದೆ ವಿಡಿಯೊ ಸಾಂಗ್‌ ಬಿಡುಗಡೆಯಾಗಲಿದೆ. ಆಗ ಅಭಿಮಾನಿಗಳಿಗೆ ನಿರಾಸೆಯಾಗುವುದಿಲ್ಲ ಎಂದು ಚಿತ್ರತಂಡ ಹೇಳಿದೆ.

ನಟ ಪ್ರಭುದೇವ ಅವರು ‘ಥಾರ್ ಮಾರ್ ಥಕ್ಕರ್ ಮಾರ್..’ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ಅವರು ಯಾವುದೇ ಮ್ಯಾಜಿಕ್ ಮಾಡಿಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇದು ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್. ಈ ಸಿನಿಮಾ ಮೇಲೆ ಚಿರಂಜೀವಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಿಂದಿನ ಲೇಖನದಸರಾ ಮಹೋತ್ಸವ: ರಾಷ್ಟ್ರಪತಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಆಹ್ವಾನ
ಮುಂದಿನ ಲೇಖನಅಪ್ಪಚ್ಚ ಕವಿ ಕೊಡಗಿನ ಒಬ್ಬ ದಾರ್ಶನಿಕ: ಅಡ್ಡಂಡ ಕಾರ್ಯಪ್ಪ