ಮನೆ ಅಪರಾಧ ಕೋಲಾರದ ಕ್ವಾರಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ: ಆತ್ಮಹತ್ಯೆ ಶಂಕೆ

ಕೋಲಾರದ ಕ್ವಾರಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ: ಆತ್ಮಹತ್ಯೆ ಶಂಕೆ

0

ಕೋಲಾರ: ಕ್ವಾರಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

Join Our Whatsapp Group

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬಳಿ ಇರುವ ಕ್ವಾರೆಯಲ್ಲಿನ ನೀರಲ್ಲಿ ಜಿಗಿದು ಮೆಡಿಕಲ್ ವಿಧ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಹೊಸಕೋಟೆ ತಾಲ್ಲೂಕಿನ ಎಂವಿಜೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ದರ್ಶಿನಿ (24) ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ.

ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪಿಡಿಯಾಟ್ರಿಕ್ ವಿದ್ಯಾರ್ಥಿನಿಯಾಗಿದ್ದಳು.

ಕಳೆದ ಎರಡು ವರ್ಷದ ಹಿಂದೆಯಷ್ಟೆ ತಂದೆಯನ್ನು  ಕಳೆದುಕೊಂಡಿದ್ದ ದರ್ಶನಿ, ರ್ಯಾಂಕ್ ಪಡೆದು ಉಚಿತ ಕೋಟಾದಡಿ ಮೆಡಿಕಲ್ ಸೀಟ್ ಸಂಪದಾನೆ ಮಾಡಿದ್ದಳು.

ವಿಧ್ಯಾರ್ಥಿನಿಯ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕಿರುಕುಳ ಆರೋಪ

ಎಂವಿಜೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತ ವಿದ್ಯಾರ್ಥಿನಿಯ ಸಂಬಂಧಿಕರು ಕಾಲೇಜು ಆಡಳಿತ ಮಂಡಳಿ ಮೇಲೆ ಆರೋಪಿಸಿದ್ದಾರೆ.

ದರ್ಶನಿ ಸಂಬಂದಿಕರಾದ ಶ್ರೀನಿವಾಸ್ ಹಾಗೂ ಹನುಮಂತಪ್ಪ ಎಂಬುವವರು ದರ್ಶನಿ ಆತ್ಮಹತ್ಯೆ ಗೆ ಎಂವಿಜೆ ಮೆಡಿಕಲ್ ಕಾಲೇಜಿನವರೆ ನೇರ ಹೊಣೆ ಎಂದು ಆರೋಪ ಮಾಡಿದ್ದಾರೆ.

ಎಂವಿಜೆ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.