ನೀನೂ
ತಿಮ್ಮ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಯಾವುದೇ ಬಸ್ಸು ಇರದ ಕಾರಣ ಆಟೋ ಮಾಡಿಕೊಂಡು ಹೊರಟ, ಊರು ತಲುಪಿದ ನಂತರ ಛಾರ್ಜ ಎಷ್ಟು ಎಂದು ಕೇಳಿದಾಗ ಆಟೋದವನು “ನೂರು ರೂಪಾಯಿ” ಎಂದನು.
ಆಟೋ ಡ್ರೈವರ್‌ಗೆ ತಿಮ್ಮ ಐವತ್ತು ರೂಪಾಯಿ ಕೊಟ್ಟನು.
“ಇಷ್ಟು ಕಡಿಮೆ ಯಾಕೆ?” ಎಂದು ಆಟೋದವನು ಕೇಳಿದಾಗ
ತಿಮ್ಮ ಹೇಳಿದ. “ನನ್ನನು ದಡ್ಡ ಅಂದುಕೊಂಡೆಯಾ ನನ್ನ ಜೊತೆಗೆ ನೀನು ಬಂದಿರುವೆಯಲ್ಲ ಅದಕ್ಕೆ ನನ್ನ ಛಾರ್ಜ್ ಕೊಟ್ಟಿರುವೆ.”
*****
ಸೈಕಲ್ ಏನಾಯ್ತು?
ಮೇಷ್ಟ್ರು ಪಾಠ ಮಾಡುತ್ತಿದ್ದಾಗ “ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು.”
ತಿಮ್ಮ ಕೇಳಿದ “ಸಾರ್ ಸೈಕಲ್ ಏನಾಯಿತು?”