ಡಾರ್ಲಿಂಗ್ ಕೃಷ್ಣ ಜನ್ಮದಿನ ಸಂಭ್ರಮದಲ್ಲಿದ್ದಾರೆ. ಜೂನ್-12 ರಂದು ಪ್ರತಿ ವರ್ಷ ಸ್ಪೆಷಲ್ ಇದ್ದೇ ಇರುತ್ತದೆ. ಈ ವರ್ಷವೂ ಅದೇ ಸಂಭ್ರಮದಲ್ಲಿಯೇ ಇದ್ದಾರೆ. ಅಷ್ಟೇ ಸ್ಪೆಷಲ್ ಆಗಿಯೇ ಬರ್ತ್ ಡೇ ಸೆಲೆಬ್ರೇಷನ್ ಮಾಡಲಾಗುತ್ತಿದೆ. ವಿಶೇಷವಾಗಿ ಮದರಂಗಿ ಮೂಲಕ ಹೀರೋ ಆಗಿ ಬಂದ ಕೃಷ್ಣ ಇದೀಗ 10 ವರ್ಷ ಕೂಡ ಪೂರೈಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಮದರಂಗಿ ಸಿನಿಮಾ 2013 ರಂದು ರಿಲೀಸ್ ಆಗಿತ್ತು. ಆ ಲೆಕ್ಕದಲ್ಲಿ ಈಗ 10 ವರ್ಷ ಪೂರ್ಣಗೊಂಡಿದೆ. ಬರ್ತ್ ಡೇ ಹಾಗೂ 10 ವರ್ಷದ ಸಂಭ್ರಮವನ್ನ ಒಟ್ಟಿಗೇನೆ ಸೆಲೆಬ್ರೇಟ್ ಮಾಡಲಾಗುತ್ತಿದೆ.
ಲವ್ ಮಾಕ್ಟೇಲ್ ಒನ್ ಸಿನಿಮಾವನ್ನ ಜನ ತುಂಬಾ ಚೆನ್ನಾಗಿಯೇ ವೆಲ್ಕಮ್ ಮಾಡಿದ್ದರು. ಲವ್ ಮಾಕ್ಟೇಲ್-2 ಸಿನಿಮಾ ಕೂಡ ಸ್ಪೆಷಲ್ ಆಗಿತ್ತು. ಇದೀಗ ಲವ್ ಮಾಕ್ಟೇಲ್-3 ಮಾಡಲು ರೆಡಿ ಆಗುತ್ತಿದ್ದಾರೆ. ಇತ್ತೀಚಿಗೆ ಈ ಬಗ್ಗೆ ಅಧಿಕೃತವಾಗಿಯೇ ಹೇಳಿಕೊಂಡದ್ದು ಇದೆ.
ಡಾರ್ಲಿಂಗ್ ಕೃಷ್ಣ ತಮ್ಮ ನಿರ್ದೇಶನದ ಮತ್ತು ನಿರ್ಮಾಣದ ಸಿನಿಮಾದ ಜೊತೆಗೆ ಬೇರೆಯವರ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಆ ಒಂದು ಲೆಕ್ಕದಲ್ಲಿ ಇದೀಗ ಮೂರು ಸಿನಿಮಾಗಳು ಇವೆ. ಮೂರು ಸ್ಪೆಷಲ್ ಟೈಟಲ್ ಇರೋ ಚಿತ್ರಗಳೇ ಆಗಿವೆ ನೋಡಿ.
ಡೈರೆಕ್ಟರ್ ಶಶಾಂಕ್ ನಿರ್ದೇಶದನ ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರದ ಟೈಟಲ್ ಟ್ರ್ಯಾಕ್ ಇನ್ನು ರಿಲೀಸ್ ಆಗಿಲ್ಲ. ಆದರೆ ಡಾರ್ಲಿಂಗ್ ಕೃಷ್ಣನ ಜನ್ಮ ದಿನಕ್ಕೆ ಈ ಟೈಟಲ್ ಟ್ರ್ಯಾಕ್ ಕೂಡ ರಿಲೀಸ್ ಆಗುತ್ತಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಲವ್ ಮೀ ಆರ್ ಹೇಟ್ ಮೀ ಶೂಟಿಂಗ್ ನಡೆಯುತ್ತಿದೆ. ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾಗಳಲ್ಲಿ ಶುಗರ್ ಫ್ಯಾಕ್ಟರಿ ರೆಡಿ ಆಗಿದೆ. ಈ ಸಿನಿಮಾನೇ ಮೊದಲು ಬರುತ್ತಾ ಅನ್ನೋ ಕುತೂಹಲ ಇದೆ. ಆದರೆ ಡೈರೆಕ್ಟರ್ ಶಶಾಂಕ್ ಅವರು ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಪ್ರಚಾರ ಜೋರಾಗಿಯೇ ಇದ್ದು, ಈ ಸಿನಿಮಾ ಬಗ್ಗೆ ನಿರೀಕ್ಷೆನೂ ಹೆಚ್ಚಿದೆ.
ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಸ್ಪೆಷಲ್ ಸಿನಿಮಾ ಮಾಡೋ ಪ್ಲಾನ್ ಮಾಡುತ್ತಿದ್ದಾರೆ. ಆ ಸಿನಿಮಾದ ಯಾವುದು ಅನ್ನೋದನ್ನ ಹೇಳೋದೇ ಬೇಡ. ಅದುವೇ ಲವ್ ಮಾಕ್ಟೇಲ್-3 ಸಿನಿಮಾನೇ ಆಗಿದೆ. ಆದರೆ ಈ ಸಿನಿಮಾದ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ.
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.