ಮನೆ ಮನರಂಜನೆ ಜನ್ಮದಿನದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ

ಜನ್ಮದಿನದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ

0

ಡಾರ್ಲಿಂಗ್‌ ಕೃಷ್ಣ ಜನ್ಮದಿನ ಸಂಭ್ರಮದಲ್ಲಿದ್ದಾರೆ. ಜೂನ್-12 ರಂದು ಪ್ರತಿ ವರ್ಷ ಸ್ಪೆಷಲ್ ಇದ್ದೇ ಇರುತ್ತದೆ. ಈ ವರ್ಷವೂ ಅದೇ ಸಂಭ್ರಮದಲ್ಲಿಯೇ ಇದ್ದಾರೆ. ಅಷ್ಟೇ ಸ್ಪೆಷಲ್ ಆಗಿಯೇ ಬರ್ತ್ ಡೇ ಸೆಲೆಬ್ರೇಷನ್ ಮಾಡಲಾಗುತ್ತಿದೆ. ವಿಶೇಷವಾಗಿ ಮದರಂಗಿ ಮೂಲಕ ಹೀರೋ ಆಗಿ ಬಂದ ಕೃಷ್ಣ ಇದೀಗ 10 ವರ್ಷ ಕೂಡ ಪೂರೈಸಿದ್ದಾರೆ.

Join Our Whatsapp Group

ಡಾರ್ಲಿಂಗ್ ಕೃಷ್ಣ ಅಭಿನಯದ ಮದರಂಗಿ ಸಿನಿಮಾ 2013 ರಂದು ರಿಲೀಸ್ ಆಗಿತ್ತು. ಆ ಲೆಕ್ಕದಲ್ಲಿ ಈಗ 10 ವರ್ಷ ಪೂರ್ಣಗೊಂಡಿದೆ. ಬರ್ತ್‌ ಡೇ ಹಾಗೂ 10 ವರ್ಷದ ಸಂಭ್ರಮವನ್ನ ಒಟ್ಟಿಗೇನೆ ಸೆಲೆಬ್ರೇಟ್ ಮಾಡಲಾಗುತ್ತಿದೆ.

ಲವ್ ಮಾಕ್ಟೇಲ್ ಒನ್ ಸಿನಿಮಾವನ್ನ ಜನ ತುಂಬಾ ಚೆನ್ನಾಗಿಯೇ ವೆಲ್‌ಕಮ್ ಮಾಡಿದ್ದರು. ಲವ್ ಮಾಕ್ಟೇಲ್-2 ಸಿನಿಮಾ ಕೂಡ ಸ್ಪೆಷಲ್ ಆಗಿತ್ತು. ಇದೀಗ ಲವ್ ಮಾಕ್ಟೇಲ್-3 ಮಾಡಲು ರೆಡಿ ಆಗುತ್ತಿದ್ದಾರೆ. ಇತ್ತೀಚಿಗೆ ಈ ಬಗ್ಗೆ ಅಧಿಕೃತವಾಗಿಯೇ ಹೇಳಿಕೊಂಡದ್ದು ಇದೆ.

ಡಾರ್ಲಿಂಗ್ ಕೃಷ್ಣ ತಮ್ಮ ನಿರ್ದೇಶನದ ಮತ್ತು ನಿರ್ಮಾಣದ ಸಿನಿಮಾದ ಜೊತೆಗೆ ಬೇರೆಯವರ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಆ ಒಂದು ಲೆಕ್ಕದಲ್ಲಿ ಇದೀಗ ಮೂರು ಸಿನಿಮಾಗಳು ಇವೆ. ಮೂರು ಸ್ಪೆಷಲ್ ಟೈಟಲ್ ಇರೋ ಚಿತ್ರಗಳೇ ಆಗಿವೆ ನೋಡಿ.

ಡೈರೆಕ್ಟರ್ ಶಶಾಂಕ್ ನಿರ್ದೇಶದನ ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರದ ಟೈಟಲ್ ಟ್ರ್ಯಾಕ್ ಇನ್ನು ರಿಲೀಸ್ ಆಗಿಲ್ಲ. ಆದರೆ ಡಾರ್ಲಿಂಗ್ ಕೃಷ್ಣನ ಜನ್ಮ ದಿನಕ್ಕೆ ಈ ಟೈಟಲ್ ಟ್ರ್ಯಾಕ್ ಕೂಡ ರಿಲೀಸ್ ಆಗುತ್ತಿದೆ.

ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಲವ್ ಮೀ ಆರ್ ಹೇಟ್‌ ಮೀ ಶೂಟಿಂಗ್ ನಡೆಯುತ್ತಿದೆ. ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾಗಳಲ್ಲಿ ಶುಗರ್ ಫ್ಯಾಕ್ಟರಿ ರೆಡಿ ಆಗಿದೆ. ಈ ಸಿನಿಮಾನೇ ಮೊದಲು ಬರುತ್ತಾ ಅನ್ನೋ ಕುತೂಹಲ ಇದೆ. ಆದರೆ ಡೈರೆಕ್ಟರ್ ಶಶಾಂಕ್ ಅವರು ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಪ್ರಚಾರ ಜೋರಾಗಿಯೇ ಇದ್ದು, ಈ ಸಿನಿಮಾ ಬಗ್ಗೆ ನಿರೀಕ್ಷೆನೂ ಹೆಚ್ಚಿದೆ.

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಸ್ಪೆಷಲ್ ಸಿನಿಮಾ ಮಾಡೋ ಪ್ಲಾನ್ ಮಾಡುತ್ತಿದ್ದಾರೆ. ಆ ಸಿನಿಮಾದ ಯಾವುದು ಅನ್ನೋದನ್ನ ಹೇಳೋದೇ ಬೇಡ. ಅದುವೇ ಲವ್ ಮಾಕ್ಟೇಲ್-3 ಸಿನಿಮಾನೇ ಆಗಿದೆ. ಆದರೆ ಈ ಸಿನಿಮಾದ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ.

ಹಿಂದಿನ ಲೇಖನದೆಹಲಿಯಲ್ಲಿ ರಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ
ಮುಂದಿನ ಲೇಖನ‘ರಾಮಾಯಣ’ ಚಿತ್ರದಲ್ಲಿ ರಾವಣ ಪಾತ್ರವನ್ನು ಯಶ್ ತಿರಸ್ಕರಿಸಿದ್ದು ಯಾಕೆ ?