ಮನೆ ಸುದ್ದಿ ಜಾಲ ತಂದೆ ಸಾವಿನ ನೋವಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ತಂದೆ ಸಾವಿನ ನೋವಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

0

ಬೆಂಗಳೂರು (Bengaluru):  ತಂದೆ ಸಾವಿನ ನೋವಿನಲ್ಲೂ ಎಸ್‌ಎಸ್‌ಎಲ್‌ಸಿ (sslc) ಪರೀಕ್ಷೆಗೆ  ವಿದ್ಯಾರ್ಥಿನಿ ಬಿ.ವೈಷ್ಣವಿ ಹಾಜರಾಗಿದ್ದು, ವಿದ್ಯಾರ್ಥಿನಿ ಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ತಂದೆ ಹೃದಯಾಘಾತದಿಂದ (Heart attack)  ಮೃತಪಟ್ಟಿದ್ದಾರೆ. ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್​ನಲ್ಲಿ ಗಣಿತ ಪರೀಕ್ಷೆ ಬರೆದ ನಂತರ ತಂದೆಯ ಅಂತ್ಯ ಸಂಸ್ಕಾರದಲ್ಲಿ ವಿದ್ಯಾರ್ಥಿನಿ ಬಿ. ವೈಷ್ಣವಿ ಭಾಗಿ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇಂದು (ಏಪ್ರಿಲ್ 4) ಗಣಿತ (maths) ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ಬಳಿಕ ತಂದೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ. ವರ್ಷವಿಡೀ ಓದಿದ ಪರೀಕ್ಷೆಗೆ ತೊಂದರೆ ಆಗಬಾರದು ಎಂದು ಪರೀಕ್ಷೆ ಬರೆಯುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ.  

ಇಂದಿನ ಪರೀಕ್ಷೆ ನಂತರ ವಿದ್ಯಾರ್ಥಿನಿ ತಂದೆ ಕಾರ್ಯ ಆರಂಭ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.