ಮನೆ ರಾಷ್ಟ್ರೀಯ ಪುಣೆ ಮೇಲ್ಸೇತುವೆಯಲ್ಲಿ ಟ್ಯಾಂಕರ್‌ ಪಲ್ಟಿ: ನಾಲ್ವರು ಸಜೀವ ದಹನ

ಪುಣೆ ಮೇಲ್ಸೇತುವೆಯಲ್ಲಿ ಟ್ಯಾಂಕರ್‌ ಪಲ್ಟಿ: ನಾಲ್ವರು ಸಜೀವ ದಹನ

0

ಮುಂಬೈ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್​ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಲಾರಿ ಹೊತ್ತಿಕೊಂಡು ಉರಿದಿರುವ ಘಟನೆ ಮುಂಬೈ-ಪುಣೆ ಎಕ್ಸ್​ ಪ್ರೆಸ್​ ವೇನಲ್ಲಿ ನಡೆದಿದೆ.

Join Our Whatsapp Group

ಘಟನೆಯು ಲೋನಾವಾಲಾ-ಖಂಡಾಲಾ ಮಾರ್ಗದಲ್ಲಿ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ-ಪುಣೆ ಎಕ್ಸ್ ​ಪ್ರೆಸ್ ​ವೇನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದು ಬ್ರಿಡ್ಜ್​ ಕೆಳಗೆ ಸಂಚರಿಸುತ್ತಿದ್ದವರಿಗು ತಗುಲಿದೆ.

ಸೇತುವೆ ಕೆಳಭಾಗ ಪ್ರಯಾಣಿಸುತ್ತಿದ್ದ ಬೈಕ್ ಸವಾರರಿಗೆ ಬೆಂಕಿ ತಗುಲಿದ್ದು ಈ ಪೈಕಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.