ಮನೆ ತಂತ್ರಜ್ಞಾನ ಭಾರತದಲ್ಲಿಂದು 108MP ಕ್ಯಾಮೆರಾದ ಇನ್ಫಿನಿಕ್ಸ್‌ ನೋಟ್‌ 30 5G ಸ್ಮಾರ್ಟ್‌ ಫೋನ್‌ ಬಿಡುಗಡೆ

ಭಾರತದಲ್ಲಿಂದು 108MP ಕ್ಯಾಮೆರಾದ ಇನ್ಫಿನಿಕ್ಸ್‌ ನೋಟ್‌ 30 5G ಸ್ಮಾರ್ಟ್‌ ಫೋನ್‌ ಬಿಡುಗಡೆ

0

ಭಾರತದಲ್ಲಿ ಕ್ಯಾಮೆರಾ ಸ್ಮಾರ್ಟ್​ ಫೋನ್​ ಗಳ ಹಾವಳಿ ಭರ್ಜರಿ ಆಗಿದೆ. ನಿರಂತರವಾಗಿ ಆಕರ್ಷಕ ಕ್ಯಾಮೆರಾ ಫೋನ್​ಗಳು ಬಿಡುಗಡೆ ಆಗುತ್ತಿದೆ. ಇದೀಗ ಇನ್ಫಿನಿಕ್ಸ್ ಸರದಿ.

Join Our Whatsapp Group

ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್​ ಗಳನ್ನು ಬಿಡುಗಡೆ ಮಾಡಿ ಹೆಸರುವಾಸಿ ಆಗಿರುವ ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ತನ್ನ ಹೊಸ ಇನ್ಫಿನಿಕ್ಸ್‌ ನೋಟ್‌ 30 5G ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಈ ಸ್ಮಾರ್ಟ್‌ ಫೋನ್‌ ಭಾರತದಲ್ಲಿ ಜೂನ್ 14 ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್​ ಕಾರ್ಟ್ ನಲ್ಲಿ ಲಾಂಚ್‌ ಆಗಲಿದೆ. ಈ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಹೊರಹಾಕಿದೆ.

ವಿಶೇಷ ಎಂದರೆ, ಈ ಫೋನ್ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಆಯ್ಕೆಯನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಕೂಡ ನೀಡಲಾಗಿದೆ.

ಈ ಸ್ಮಾರ್ಟ್ ​ಫೋನ್ ​ನ ಬೆಲೆ ಎಷ್ಟಿರಬಹುದು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 15,000 ರೂ. ಆಸುಪಾಸಿನಲ್ಲಿ ಇರಬಹುದು. 4GB RAM + 128GB ಹಾಗೂ 8GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಲಿದೆ. ಇದು ನೀಲಿ, ಕಪ್ಪು ಮತ್ತು ಗೋಲ್ಡ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.