ಮನೆ ಅಪರಾಧ ಪೊಲೀಸ್​​ ಠಾಣೆಯಲ್ಲಿ ವಿಚಾರಣೆ ವೇಳೆ ಪಿಎಸ್ ಐ ಮೇಲೆ ಹಲ್ಲೆ

ಪೊಲೀಸ್​​ ಠಾಣೆಯಲ್ಲಿ ವಿಚಾರಣೆ ವೇಳೆ ಪಿಎಸ್ ಐ ಮೇಲೆ ಹಲ್ಲೆ

0

ಬೆಂಗಳೂರು: ವಿಚಾರಣೆ ವೇಳೆ ಪಿಎಸ್​ಐ ಪಿಎಸ್ ಐ ಮೇಲೆ ಹಲ್ಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್​​ ಠಾಣೆಯಲ್ಲಿ ನಡೆದಿದೆ.

Join Our Whatsapp Group

ಮೌನೇಶ್ ಎಂಬಾತ ಹಲ್ಲೆ ಮಾಡಿರುವ ವ್ಯಕ್ತಿ. ಪಾಸ್ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಜತೆ ಮೌನೇಶ್​​ ಗಲಾಟೆ ಮಾಡಿದ್ದನು. ಹೀಗಾಗಿ ಬಿಎಂಟಿಸಿ ಸಿಬ್ಬಂದಿ ಬಸ್ ಸಮೇತ ಆತನನ್ನು ಪೊಲೀಸ್​ ಠಾಣೆಗೆ ಕರೆತಂದಿದ್ದರು. ಈ ಬಗ್ಗೆ ಮೌನೇಶ್ ​ನನ್ನು ಪಿಎಸ್ ​ಐ ಸಿದ್ದು ಹೂಗಾರ್ ವಿಚಾರಣೆ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

ಗಾಯಗೊಂಡ ಪಿಎಸ್ ​ಐ ಸಿದ್ದು ಹೂಗಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯ ಪೊಲೀಸ್​ ಠಾಣೆಗೆ ಹಿರಿಯ ಪೊಲೀಸ್​ ಅಧಿಕಾರಿಗಳು ದೌಡಾಯಿಸಿದ್ದಾರೆ.