ಮನೆ ಮನರಂಜನೆ ಆಗಸ್ಟ್ 27 ರಂದು ‘ಕಾಂತಾರ 2’ ಸಿನಿಮಾದ ಮುಹೂರ್ತ

ಆಗಸ್ಟ್ 27 ರಂದು ‘ಕಾಂತಾರ 2’ ಸಿನಿಮಾದ ಮುಹೂರ್ತ

0

ಬೆಂಗಳೂರು :  ‘ಕಾಂತಾರ’ ಎರಡನೇ ಭಾಗವನ್ನು ತೆರೆಗೆ ತರಲಾಗುತ್ತದೆ ಎಂದು ನಟ-ನಿರ್ದೇಶಕ ರಿಷಬ್ ಶೆಟ್ಟಿ ಘೋಷಿಸಿದ್ದು, ಆಗಸ್ಟ್ 27 ರಂದು ಚಿತ್ರದ ಮುಹೂರ್ತ ನಡೆಯಲಿದೆ.

Join Our Whatsapp Group

ವಿಜಯ್ ಕಿರಗಂದೂರು ರವರು ಹೇಳುವಂತೆ ರಿಷಬ್ ಆಗಸ್ಟ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಿದ್ದಾರೆ. ಏಕೆಂದರೆ ಚಿತ್ರೀಕರಣದ ಒಂದು ಭಾಗಕ್ಕೆ ಮಳೆಯ ಅಗತ್ಯವಿದೆ. ಮೊದಲ ಭಾಗಕ್ಕಿಂತ ಮುಂದಿನ ಭಾಗದ ಬಜೆಟ್ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ವರದಿಯ ಪ್ರಕಾರ, ರಿಷಬ್ ಶೆಟ್ಟಿ ಅವರು ಕಾಂತಾರ 2 ರ ಸ್ಕ್ರಿಪ್ಟ್ ಅನ್ನು ಲಾಕ್ ಮಾಡಿದ್ದು, ಚಿತ್ರವು ಪೂರ್ವಭಾವಿಯಾಗಿದೆ ಮತ್ತು ಕಾಂತಾರದ ಮುಂದುವರಿದ ಭಾಗವಲ್ಲ ಎಂಬುದು ಸುದ್ದಿಯಾಗಿದೆ.

”ನೀವು ನೋಡಿರುವುದು ನಿಜವಾಗಿ ಭಾಗ 2 ಮತ್ತು ಮುಂದಿನ ವರ್ಷ ಭಾಗ 1 ಬರಲಿದೆ. ನಾನು ಕಾಂತಾರ ಚಿತ್ರೀಕರಣದಲ್ಲಿದ್ದಾಗ ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ಏಕೆಂದರೆ ಕಾಂತಾರ ಇತಿಹಾಸವು ಹೆಚ್ಚು ಆಳವನ್ನು ಹೊಂದಿದೆ. ಪ್ರಸ್ತುತ, ನಾವು ಹೆಚ್ಚಿನ ವಿವರಗಳ ಸಂಶೋಧನೆ ಮಾಡುತ್ತಿರುವುದ ರಿಂದ, ಚಿತ್ರದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ತುಂಬಾ ಬೇಗ ಅನಿಸುತ್ತದೆ ಎಂದು ರಿಷಬ್ ಹೇಳಿದ್ದರು.