ಮನೆ ಅಪರಾಧ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆ

ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆ

0

ಬೆಂಗಳೂರು(Bengaluru):ಸೋಮವಾರ ತಡರಾತ್ರಿ ಊಟ ಮುಗಿಸಿಕೊಂಡು ಬರುತ್ತಿದ್ದ ಯುವಕನನ್ನ ಕೊಲೆ(Murder) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

22 ವರ್ಷದ ಚಂದ್ರು ಕೊಲೆಯಾದ ಯುವಕ. ಗೆಳೆಯ(Friend)ನ ಹುಟ್ಟುಹಬ್ಬ(Birthday)ದ ಹಿನ್ನೆಲೆ ಚಂದ್ರು ಸ್ನೇಹಿತರ ಜೊತೆ ಊಟಕ್ಕೆ ಬಂದಿದ್ದನು. ಊಟಕ್ಕೆ ಹೋಗುತ್ತಿರುವ ವೇಳೆ ಅಪರಿಚಿತರೊಂದಿಗೆ ಗಲಾಟೆ ನಡೆದಿದ್ದು, ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ ಅಪರಿಚಿತರ ಗುಂಪು ಚಂದ್ರುಗೆ ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಘಟನೆ ಬಳಿಕ ಅಪರಿಚಿತರ ಗುಂಪು ಸ್ಥಳದಿಂದ ಪರಾರಿಯಾಗಿದೆ.

ಮೃತ ಚಂದ್ರು ಗೆಳೆಯರು ಪೊಲೀಸ್ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಕೊಲೆಯ ಎಲ್ಲ ದೃಶ್ಯಗಳು ಸಿಸಿಟಿವಿ(CCTV)ಯಲ್ಲಿ ಸೆರೆಯಾಗಿವೆ.

ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ