ಬೆಂಗಳೂರು : ಶಕ್ತಿ ಯೋಜನೆಯನ್ನು ಈಗಾಗಲೇ ಸರ್ಕಾರ ಅನುಷ್ಠಾನಗೊಳಿಸಿದೆ. ಕೆ ಎಸ್ ಆರ್ ಟಿ ಸಿ ಹಾಗೂ ಬಿ ಎಂ ಟಿ ಸಿ ಬಸ್ ನಲ್ಲಿ ಮಹಿಳೆಯರು ಈಗಾಗಲೇ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಇದೀಗ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಸೋಮವಾರದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಸ್ಮಾರ್ಟ್ ಕಾರ್ಡ್ ನನ್ನು ತಮ್ಮ ವಿಳಾಸದ ದಾಖಲೆ ನೀಡಿ ಪಡೆಯಬಹುದು.
ಬೆಂಗಳೂರು ಕೇಂದ್ರದಲ್ಲಿ ಸರ್ಕಾರ ಪ್ರತ್ಯೇಕ ಕೇಂದ್ರವನ್ನು ಹಾಗೂ ಸೇವಾ ಸಿಂಧು ಪೋರ್ಟಲ್ ನಲ್ಲಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯ ಫಲಾನುಭವಿಗಳು ರಾಜ್ಯದೊಳಗೆ ಮಾತ್ರ ಪ್ರಯಾಣಿಸಬಹುದು ಮತ್ತು ಯಾವುದೇ ಅಂತರ್ ರಾಜ್ಯ ಬಸ್ ಗಳಲ್ಲಿ ಸಂಚರಿಸಲು ಅವಕಾವಿರುವುದಿಲ್ಲ.