ಮನೆ ರಾಷ್ಟ್ರೀಯ 8 ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳ ದಾಳಿ

8 ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳ ದಾಳಿ

0

ಕೇರಳ: 3 ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮುಜ್ಜಪಿಲಂಗಾಡಿನಲ್ಲಿ ನಡೆದಿದೆ.

Join Our Whatsapp Group

ಬೀದಿ ನಾಯಿಗಳ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

8 ವರ್ಷದ ಜಾನ್ವಿ ತನ್ನ ಮನೆಯ ಅಂಗಳದಲ್ಲಿ ಇದ್ದಾಗ ಮೂರು ನಾಯಿಗಳು ಆಕೆಯ ಮೇಲೆ ದಾಳಿ ಮಾಡಿದೆ. ನೋವು ತಾಳಲಾರದೇ ಬಾಲಕಿ ಕಿರುಚಲು ಪ್ರಾರಂಭಿಸಿದ್ದಾಳೆ. ಕೆಲ ಹೊತ್ತಿನಲ್ಲೇ ಸ್ಥಳೀಯರು ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಬಾಲಕಿಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.