ಮನೆ ರಾಜಕೀಯ ಆಪ್ ಸೇರುತ್ತಿರುವ ಮತ್ತೋರ್ವ ಅಧಿಕಾರಿ ಕೆ.ಮಥಾಯ್

ಆಪ್ ಸೇರುತ್ತಿರುವ ಮತ್ತೋರ್ವ ಅಧಿಕಾರಿ ಕೆ.ಮಥಾಯ್

0

ಬೆಂಗಳೂರು(Bengaluru): ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್(Bhaskar rao) ಸೋಮವಾರ ಆಮ್​ ಆದ್ಮಿ ಪಾರ್ಟಿ(Aam Admi party) ಸೇರ್ಪಡೆಗೊಂಡ ಬೆನ್ನಲ್ಲೇ ಮತ್ತೊಬ್ಬ ಕೆಎಎಸ್ ಅಧಿಕಾರಿ ಕೆ‌. ಮಥಾಯ್(K.Mathai)  ರಾಜಕೀಯದತ್ತ ಮುಖ ಮಾಡಿದ್ದಾರೆ.

KAS ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ‌. ಮಥಾಯ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಸಕಾಲ, ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಧ್ಯ ಮುಂದಿನ ವಾರ ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.