ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ
ಅಂಬುಜಾಯತಾಂಬಕನ ಇಂಬಲಿಹ ಬೊಂಬೆ ||
ಕಾವನಯ್ಯನ ಭಟರ ಕಾವೆ ವರವೀವೆ
ದೇವಾದಿ ದೇವರ್ಕಳಿಗೆ ಕುಲದ ದೇವಿ
ಭಾವಕರ ಜೀವೆ ಚಿದ್ಭವನೈದಿಸುವೆ
ಸೇವಕರಾವೆ ಕಾಯಿ ಎನುವೆ ಧನ್ಯ ಎನುವೇ||
ಮಾಯಾಗುಣಮಯ ಅಂಬಾ ತರುವ
ಹೊಂದಿರುವೆ ತಾಯಂದಿರಖಿಳಾರ್ಥ ತಾಯಿ
ನೀನೀವೆ ಬಾಯೆನ್ನ ತಾಯೆನ್ನಲಾಯಾಸ
ಬಿಡಿಸುವೆ ಎನ್ನಯ ಪ್ರಿಯಳೆ ಪೀಯುಷನುಣಿಸುವೆ ||
ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮ
ಸುಮ್ಮನಸರ ಮನೋರಮ್ಮೆ ಶ್ರಿರಮ್ಮೆ
ನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮ
ನಮ್ಮಯ ಪ್ರಸನ್ನ ವೆಂಕಟನ ಮೆಚ್ಚಿಸಮ್ಮ ||