ಮೈಸೂರು: ಕುಲಕಸುಬು ಉಳಿಸಿ ಬೆಳೆಸುವ ಕಡೆ ಜನಾಂಗ ಕಾರ್ಯೋನ್ಮುಖರಾಗಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ತಿಳಿಸಿದರು.
ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಭಗವಾನ್ ವಿಶ್ವಕರ್ಮ ರವರ ಪೂಜಾ ಕಾರ್ಯಕ್ರಮದಲ್ಲಿ ಸಂಘದ ರಹದಾರಿ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಎಷ್ಟೇ ತಂತ್ರಜ್ಞಾನ ಅವಿಷ್ಕಾರಗಳು ಮುಂದುವರೆದರೂ ಸಹ ಪುರಾತನ ಶೈಲಿಯ ವಿಶ್ವಕರ್ಮ ಜನಾಂಗದ ಕೆತ್ತನೆ ಕೆಲಸಕ್ಕೆ ಮಹತ್ವವಿದೆ ಬೇಡಿಕೆಯಿದೆ. ಅದರಲ್ಲೂ ನಮ್ಮ ಹಳೇಮೈಸೂರು ಭಾಗದ ಶಿಲ್ಪಕಲೆ ಕೆತ್ತನೆ, ಚಿನ್ನಾಭರಣಗಳ ಶೈಲಿ, ಮತ್ತು ಮರಗೆಲಸಗಳ ಕೆಲಸ ನಿರ್ವಹಿಸುವ ವಿಶ್ವಕರ್ಮ ಜನಾಂಗದವರಿಗೆ ದೇಶವಿದೇಶದಲ್ಲಿ ಬೇಡಿಕೆಯಿದೆ. ಮೈಸೂರು ಸುತ್ತಮುತ್ತ ವಿಶ್ವಕರ್ಮ ಜನಾಂಗದ ಜನಸಂಖ್ಯೆ ಉತ್ತಮವಾಗಿದೆ ಸಂಘಟನಾತ್ಮಕವಾಗಿ ಎಲ್ಲರೂ ಒಗ್ಗೂಡಬೇಕಿದೆ ಮತ್ತು ಉಳ್ಳವರು ಉಳ್ಳವರಿಗಾಗಿ ಸಹಕಾರ ನೀಡಲು ಸಹಕಾರಿ ಸಂಘ ಸಂಸ್ಥೆಗಳ ಸ್ಥಾಪನೆಯ ಕಡೆ ಚಿಂತಿಸಿ ಎಂದು ಕರೆ ನೀಡಿದರು
ಬುದ್ಧಿವಂತಿಕೆ, ದೂರದೃಷ್ಟಿ, ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾದ ಈ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕಿಯ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಬಲರಾಗಬೇಕು’ ಎಂದು ಆಶಿಸಿದರು.
ಇಡೀ ಮನುಕುಲಕ್ಕೆ ಅನ್ನ ನೀಡುವ ರೈತಾಪಿ ವರ್ಗದವರಿಗೆ ಅತ್ಯವಶ್ಯಕ ಈ ವಿಶ್ವಕರ್ಮದವರು. ಶ್ರಮಿಕ ವರ್ಗದ ಸ್ವಾಭಿಮಾನಿ ಜೀವಿಗಳು ಇವರು. ಪ್ರತಿಯೊಂದು ದೇವರ ಪರಿಕಲ್ಪನೆ ಕಟ್ಟಿಕೊಟ್ಟದ್ದು ಈ ಸಮಾಜ. ಹೀಗಾಗಿ ವಿಶ್ವಕರ್ಮರು ಇಲ್ಲದೆ ಇ ಜಗತ್ತು ಇಲ್ಲಎಂದು ನುಡಿದರು
ಇದೇ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡ ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಸುರೇಶ್ ಗೋಲ್ಡ್ ರವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ ಹರೀಶ್ ಗೌಡ , ನಗರಪಾಲಿಕ ಸದಸ್ಯರಾದ ರಮಣಿ, ಲೋಕೇಶ್ ಪಿಯಾ, ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಸುರೇಶ್ ಗೋಲ್ಡ್, ಸಂಘದ ಗೌರವಾಧ್ಯಕ್ಷರು ರವಿಪ್ರಕಾಶ್ ಮತ್ತು ರಾಘವೇಂದ್ರ , ಹಾಗೂ ಇನ್ನಿತರರು ಭಾಗವಹಿಸಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.