ಮನೆ ಸುದ್ದಿ ಜಾಲ ಕ್ರೂಸರ್ ವಾಹನ- ಟ್ಯಾಂಕರ್ ಡಿಕ್ಕಿ: 6 ಮಂದಿ ಸಾವು

ಕ್ರೂಸರ್ ವಾಹನ- ಟ್ಯಾಂಕರ್ ಡಿಕ್ಕಿ: 6 ಮಂದಿ ಸಾವು

0

ಕಲಬುರಗಿ: ಕ್ರೂಸರ್ ವಾಹನ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಕಲಬುರಗಿ ಜಿಲ್ಲೆಯ 6 ಜನರು ಸಾವನ್ನಪ್ಪಿರುವಂತಹ ಘಟನೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಶಿರವಾಡಿ ಬಳಿ ನಡೆದಿದೆ.

Join Our Whatsapp Group

ಕ್ರೂಸರ್‌ ನಲ್ಲಿದ್ದ ಐವರು ಮಹಿಳೆಯರು, ಒಂದು ಮಗು ದುರ್ಮರಣ ಹೊಂದಿದೆ. ಮೃತರನ್ನು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಅಣೂರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಕ್ರೂಸರ್ ವಾಹನದಲ್ಲಿ ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿದ್ದರು. ವಾಪಸಾಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ.