ಮನೆ ರಾಜ್ಯ ಪಟಾಕಿ ಗೋಡೌನ್ ದುರಂತ ಪ್ರಕರಣ: 27 ಪಟಾಕಿ ಅಂಗಡಿ ಜಪ್ತಿ- ಡಿಸಿ ರಘುನಂದನ್

ಪಟಾಕಿ ಗೋಡೌನ್ ದುರಂತ ಪ್ರಕರಣ: 27 ಪಟಾಕಿ ಅಂಗಡಿ ಜಪ್ತಿ- ಡಿಸಿ ರಘುನಂದನ್

0

ಹಾವೇರಿ: ಜಿಲ್ಲೆಯ ಆಲದಕಟ್ಟಿ ಗ್ರಾಮದ ಬಳಿಯ ಪಟಾಕಿ ಗೋಡೌನ್​​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಒಟ್ಟು 27 ಪಟಾಕಿ ಅಂಗಡಿಗಳನ್ನು ಜಪ್ತಿ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ರಘುನಂದನ್​​ ಮೂರ್ತಿ ಹೇಳಿದರು.

ಹಾವೇರಿಯಲ್ಲಿ  ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಎಸ್​ಪಿ ಶಿವಕುಮಾರ ಗುಣಾರೆ, ಸಿಇಒ ಅಕ್ಷಯ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಅಂಗಡಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕವೇ ರೀ ಓಪನ್​ ಮಾಡಲು ಅವಕಾಶ ನೀಡುತ್ತೇವೆ. ದಾಖಲೆ ಸರಿ ಇದ್ದರೇ ಪಟಾಕಿ ಮಾರಲು ಅವಕಾಶ ನೀಡಲಾಗುತ್ತದೆ ಎಂದರು.

ಹಾವೇರಿ ಜಿಲ್ಲೆ ಆಲದಕಟ್ಟಿ ಗ್ರಾಮದ ಬಳಿ ಪಟಾಕಿ ಗೋಡೌನ್​ ನಲ್ಲಿ ದುರಂತ ಸಂಭವಿಸಿತ್ತು. ಈಗಾಗಲೇ ಘಟನೆ ಸಂಬಂಧ, ಎಫ್ ​ಐಆರ್ ದಾಖಲಾಗಿದೆ. ದುರಂತದಲ್ಲಿ ನಾಲ್ವರ ಸಾವಾಗಿದೆ. ವೆಲ್ಡಿಂಗ್ ಮಾಡಿಸುವಾಗ ನಡೆದ ನಿರ್ಲಕ್ಷ್ಯದಿಂದ ಪಟಾಕಿ ಸಿಡಿದು ಅನಾಹುತ ಸಂಭವಿಸಿದೆ ಎಂದು ತಿಳಿಸಿದರು.

ಈ ಘಟನೆ ಕುರಿತು ಎಡಿಸಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಅವರು ಪರಿಶೀಲನೆ ಮಾಡಿದ ಬಳಿಕ ಅವರು ವರದಿ ನೀಡುತ್ತಾರೆ. ಈ ವರದಿ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಪಟಾಕಿ ದಾಸ್ತಾನು, ಸೇಪ್ಟಿ ಕ್ರಮಗಳು ಸೇರಿದಂತೆ ಏನೇನು ಲೋಪಗಳಿದ್ದವು ಅಂತ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಒಂದು ವಾರದಲ್ಲಿ ವರದಿ ನೀಡುವಂತೆ ಎಡಿಸಿಯವರ ನೇತೃತ್ವದ ಕಮಿಟಿಗೆ ಹೇಳಿದ್ದೇನೆ ಎಂದು ಹೇಳಿದರು.

ಗಣೇಶ ಹಬ್ಬಕ್ಕೆ ಒಂದು ಜಾಗ ನಿಗಧಿ ಮಾಡಿ ಪಟಾಕಿ ಮಾರಲು ಅವಕಾಶ ನೀಡುತ್ತೇವೆ. ಮೇಡ್ಲೇರಿ ಗ್ರಾಮದಲ್ಲಿ ಪಟಾಕಿ ಗೋದಾಮುಗಳಿದೆ, ಅವರಿಗೂ ನೋಟೀಸ್ ಕೊಟ್ಟಿದ್ದೇವೆ. ದಾಖಲ ಪರಿಶೀಲನೆ ಬಳಿಕವೇ ಪಟಾಕಿ ಮಾರಾಟಕ್ಕೆ ಅವಕಾಶ ನೀಡುತ್ತೇವೆ. ಎಡಿಸಿ ಕಮಿಟಿ ವರದಿ ನೀಡುತ್ತದೆ, ಅದನ್ನು ಆಧರಿಸಿ ಸೂಕ್ತ ಕ್ರಮ ತಗೊಳ್ಳುತ್ತೇವೆ ಎಂದು ಹೇಳಿದರು.

ಹಿಂದಿನ ಲೇಖನಮನೆ ಕಟ್ಟುವ ವಿಚಾರಕ್ಕೆ ಜಗಳ: ವ್ಯಕ್ತಿಯ ಕೈ ಬೆರಳು ಕಟ್
ಮುಂದಿನ ಲೇಖನವಿಟಿಯುನಲ್ಲಿ 15 ಆನ್ ಲೈನ್ ಕೋರ್ಟ್: ಸೆ.30ರೊಳಗೆ ಪ್ರವೇಶ ಪಡೆಯಲು ಅವಕಾಶ