ಮನೆ ಮನರಂಜನೆ ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಜೋ ಲಿಂಡ್ನರ್ ಅನುಮಾನಾಸ್ಪದ ಸಾವು

‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಜೋ ಲಿಂಡ್ನರ್ ಅನುಮಾನಾಸ್ಪದ ಸಾವು

0

ಬಾಡಿ ಬಿಲ್ಡಿಂಗ್ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ ನಿಧನರಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಕಬ್ಬಿಣದಂತಹ ದೇಹ ಹೊಂದಿದ್ದ ಅವರು ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣ ಆಗಿದೆ.

Join Our Whatsapp Group


ಇತ್ತೀಚೆಗೆ ಅವರಿಗೆ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ರಕ್ತನಾಳದ ಸಮಸ್ಯೆಯೇ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಜೋ ಲಿಂಡ್ನರ್ ನಿಧನದ ಸುದ್ದಿಯನ್ನು ಅವರ ಪ್ರೇಯಸಿ ಖಚಿತಪಡಿಸಿದ್ದಾರೆ.
ಕನ್ನಡದ ಪೊಗರು ಸಿನಿಮಾದಲ್ಲಿ ಜೋ ಲಿಂಡ್ನರ್ ನಟಿಸಿದ್ದರು. ನಟ ಧ್ರುವ ಸರ್ಜಾ ಎದುರು ಅವರು ಫೈಟ್ ಮಾಡಿದ್ದರು. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್ ಈಗ ನೆನಪು ಮಾತ್ರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.


ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಈ ಮೂವರು ಬಾಡಿ ಬಿಲ್ಡರ್ ಜೊತೆ ಧ್ರುವ ಸರ್ಜಾ ಆಕ್ಷನ್ ಸೀನ್ಗಳು ಆಕ್ಷನ್ ಪ್ರಿಯರನ್ನು ರೊಚ್ಚಿಗೆಬ್ಬಿಸಿದ್ದವು. ಈ ಮೂವರು ಬಾಡಿ ಬಿಡ್ಡರ್ನಲ್ಲಿ ಅತ್ಯಂತ ಕಿರಿಯನಾಗಿದ್ದ ಜರ್ಮನಿ ಮೂಲದ ಜೋ ಲಿಂಡ್ನೆರ್ ದಿಢೀರನೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.


ಜರ್ಮನಿ ಮೂಲದವರಾದರೂ ಜೋ ಲಿಂಡ್ನರ್ ಹಲವು ವರ್ಷಗಳಿಂದ ಥಾಯ್ಲೆಂಡ್ನಲ್ಲಿ ನೆಲೆಸಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ದೇಹದಾಢ್ಯತೆಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಈ ವಿಡಿಯೋಗಳಿಂದಲೇ ವಿಶ್ವದಾದ್ಯಂತ ಹಲವರನ್ನು ಸೆಳೆದಿದ್ದರು. ಇಷ್ಟೊಂದು ಫಿಟ್ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಸಾವನ್ನಪ್ಪಿದ್ದಾರೆ.