ಮನೆ ಮನರಂಜನೆ ಜುಲೈ 14ಕ್ಕೆ ‘ಅಪರೂಪ’ ಚಿತ್ರ ತೆರೆಗೆ

ಜುಲೈ 14ಕ್ಕೆ ‘ಅಪರೂಪ’ ಚಿತ್ರ ತೆರೆಗೆ

0

ಮಹೇಶ್‌ ಬಾಬು ನಿರ್ದೇಶನದ “ಅಪರೂಪ’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜುಲೈ 14ರಂದು ತೆರೆಕಾಣುತ್ತಿದೆ. ಸುಗ್ಗಿ ಸಿನಿಮಾಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಸಿನಿಮಾದಲಿ ಸುಘೋಷ್‌ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಟೈಟಲ್‌ನಂತೆ ಸಿನಿಮಾದ ಕಥೆ ಕೂಡಾ ಅಷ್ಟೇ ವಿಭಿನ್ನವಾಗಿದೆಯಂತೆ.

Join Our Whatsapp Group

ಈ ಸಿನಿಮಾದ ಅಪರೂಪದ ಅಂಶ ಏನೆಂದು ಕೇಳಿದರೆ ಹೀರೋ ಪ್ರೀತಿ ಮಾಡುವ ರೀತಿಯ ಅಪರೂಪದ ಶೈಲಿ ಎನ್ನುತ್ತಾರೆ. “ಇದು ಇವತ್ತಿನ ಜನರೇಶನ್‌ ಸಿನಿಮಾ. ಇಲ್ಲಿ ವಿಲನ್‌, ಅನವಶ್ಯಕ ಅಬ್ಬರ ಯಾವುದೂ ಇಲ್ಲ. ಇಲ್ಲಿ ಹೀರೋ ಕೇರ್‌ಲೆಸ್‌ ಹುಡುಗ. ಆದರೆ, ಪ್ರೀತಿ ವಿಷಯಕ್ಕೆ ಬಂದಾಗ ಹೇಗೆ ಪ್ರೀತಿ ಮಾಡುತ್ತಾನೆ ಎಂಬುದು ಹೈಲೈಟ್‌’ ಎನ್ನುತ್ತಾರೆ.

ಅಶೋಕ್‌ , ಅರುಣಾ ಬಲರಾಜ್ ಅವಿನಾಶ್‌, ಕುರಿಪ್ರತಾಪ್‌ , ದಿನೇಶ್‌ ಮಂಗಳೂರು, ವಿಜಯ್‌ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್‌ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್‌ ಪೈ ಸಂಗೀತ ಹಾಡುಗಳಿಗೆ ಅರ್ಮನ್‌ ಮಲ್ಲಿಕ್‌, ಅನಿರುದ್ಧ್ ಶಾಸ್ತ್ರಿ, ಸಂಗೀತ ರವೀಂದ್ರನಾಥ್‌, ಪ್ರಜ್ವಲ್‌ ಪೈ ಹಾಗೂ ಪವರ್‌ ಸ್ಟಾರ್ ಪುನೀತ್‌ ರಾಜ್‌ ಕುಮಾರ್‌ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ.