ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು.
ಗಾಂಧೀಜಿ: “ನಿಮ್ಮ ತಂದೆಯವರು ಏನು ಮಾಡುತ್ತಾರೆ?”
ಹುಡುಗಿ: “ಅವರು ಬೀಡಿ ಆಂಗಡಿ ಇಟ್ಟಿದ್ದಾರೆ.”
ಆಗ ಗಾಂಧೀಜಿಯವರು ಆ ಹುಡುಗಿಗೆ ‘ಬೀಡಿ ಸೇದುವುದು ಒಳ್ಳೆಯದಲ್ಲ’ ಎಂದು ಬರೆದುಕೊಟ್ಟರು!
***
ವಿಜ್ಞಾನಿ ಐನ್‍ಸ್ಟೀ ನರು ತಮ್ಮ ಜೋಬಿನಲ್ಲಿ ಸದಾ ಮೂರು ಕನ್ನಡಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಸ್ನೇಹಿತರೊಬ್ಬರು ಕಾರಣ ಕೇಳಿದರು. ಆಗ ವಿಜ್ಞಾನಿ ಐ ನ್‍ಸ್ಟೀನ್‍ರವರು ಉತ್ತರಿಸಿದ್ದು ಹೀಗೆ:
“ದೂರದವಸ್ತುಗಳನ್ನು ನೋಡಲು ಒಂದು. ಸಮೀಪದ ವಸ್ತುಗಳನ್ನು ನೋಡಲು ಇನ್ನೊಂದು ಉಳಿದ ಮೂರನೆಯ ಕನ್ನಡಕ ಈ ಎರಡು ಕನ್ನಡಕಗಳನ್ನು ಹುಡುಕುವುದಕ್ಕಾಗಿ!” ಸ್ನೇಹಿತರು ಕಣ್ಣುಗಳನ್ನು ಪಿಳಿಕಿಸುತ್ತಾ ನಿ೦ತುಬಿಟ್ಟರು.